ಹಳೇ ಹುಬ್ಬಳ್ಳಿ ಗಲಭೆ (Hubballi Riot) ಪ್ರಕರಣದ ರೂವಾರಿಯ ಫೋನ್ ಎಲ್ಲಿ ಹೋಯ್ತು? ತನಿಖಾಧಿಕಾರಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಮುಂಬೈಯಿಂದ ವಸೀಂ ಪಠಾಣ್ (Wasin Pathan)ಬರಿಗೈಲಿ ಬಂದಿದ್ದಾನೆ. ಹಾಗಾದ್ರೆ ಆತನ ಬಳಿ ಇದ್ದ ಮೊಬೈಲ್ ಏನಾಯ್ತು..?

ನಾನು ಮಾಸ್ಟರ್ ಮೈಂಡ್ ಅಲ್ಲ, ನನ್ನನ್ನು ವ್ಯವಸ್ಥಿತವಾಗಿ ಸಿಕ್ಕಿ ಹಾಕಿಸಲಾಗಿದೆ ಎಂದಿದ್ದ ವಸೀಂ ವೀಡಿಯೋ ಬಿಡುಗಡೆ ಮಾಡಿ ಫ್ಲೈಟ್ ಮೂಲಕ ಮುಂಬೈಯಿಂದ ಬೆಳಗಾವಿಗೆ ಬಂದಿಳಿದಿದ್ದ. ಬೆಳಗಾವಿಯಲ್ಲಿ ವಸೀಂ ನನ್ನು ವಶಪಡಿಸಿಕೊಂಡಾಗ ಪೊಲೀಸರ ಕೈಗ ಮೊಬೈಲ್ ಸಿಕ್ಕಿಲ್ಲ. ಮೊಬೈಲನ್ನು ನಾಶ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದನಾ..? ಎಂಬ ಅನುಮಾನ ವ್ಯಕ್ತವಾಗಿದೆ. ಮೊಬೈಲ್ ಎಲ್ಲಿದೆ ಎನ್ನುವುದರ ಬಗ್ಗೆಅಜ್ಞಾತ ಸ್ಥಳದಲ್ಲಿ ವಸೀಂ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್ ಸಿಕ್ಕರೆ ಪಿತೂರಿಗೆ ಸಂಬಂಧಿಸಿ ಮಹತ್ವದ ಮಾಹಿತಿ ಸಿಗೋ ಸಾಧ್ಯತೆ ಇದೆ.