Thirthahalli: ನಾನು ರಾಜೀನಾಮೆ ಕೊಡುವ ಸ್ಥಿತಿ ತರಬೇಡಿ, ಪೊಲೀಸರಿಗೆ ಗೃಹ ಸಚಿವರ ಮನವಿ

Jan 2, 2022, 9:29 AM IST

ಶಿವಮೊಗ್ಗ (ಜ. 02):  ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಇಲ್ಲಿನ ಪುರಾಣ ಪ್ರಸಿದ್ಧವಾದ ಎಳ್ಳಮಾವಾಸ್ಯೆ ಜಾತ್ರೆ ಡಿ.2 ರಿಂದ ಮೂರು ದಿನಗಳ ಪರ್ಯಂತ ಅದ್ಧೂರಿಯಾಗಿ ಜರುಗಲಿದ್ದು ಓಮಿಕ್ರೋನ್‌ ಸೋಂಕಿನ ಭೀತಿಯ ನಡುವೆಯೂ ಇಡೀ ಪಟ್ಟಣವನ್ನು ವಿದ್ಯುತ್‌ ಅಲಂಕಾರಗಳೊಂದಿಗೆ ಶೃಂಗಾರಗೊಳಿಸಲಾಗಿದೆ. ಜಾತ್ರೆಯ ಯಶಸ್ಸಿಗೆ ಎಲ್ಲ ರೀತಿಯ ಮುಂಜಾಗ್ರತೆಯೊಂದಿಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ.

ಡಿ.2ರಂದು ತುಂಗಾನದಿಯ ರಾಮಕೊಂಡದಲ್ಲಿ ತೀರ್ಥಸ್ನಾನ, 3ರಂದು ಶ್ರೀ ರಾಮೇಶ್ವರ ದೇವರ ರಥೋತ್ಸವ ಹಾಗೂ 4 ರಂದು ಸಂಜೆ ತುಂಗಾನದಿಯಲ್ಲಿ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ವೈಭವದ ತೆಪ್ಪೋತ್ಸವ ಜರುಗಲಿದೆ. 

ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ. 'ಪೊಲೀಸರು ಒಳ್ಳೆಯ ಕೆಲಸ ಮಾಡಿದರೆ, ಗೃಹ ಸಚಿವನಾಗಿ ನನಗೆ ಒಳ್ಳೆಯ ಕ್ರೆಡಿಟ್ ಸಿಗುತ್ತದೆ. ನೀವು ತಪ್ಪು ಮಾಡಿದರೆ ನಾನು ರಾಜೀನಾಮೆ ಕೊಡಬೇಕಾಗುತ್ತದೆ. ನೀವು ಒಳ್ಳೆಯ ಕೆಲಸ ಮಾಡಿ, ನಿಮ್ಮ ಅಗತ್ಯತೆಗಳಿಗೆ ನಾನು ಸ್ಪಂದಿಸುತ್ತೇನೆ' ಎಂದರು.