Mekedatu Project: ರೂಲ್ಸ್ ಮೀರಿ ಸಭೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಆರಗ

Jan 8, 2022, 10:56 AM IST

ಬೆಂಗಳೂರು (ಜ. 08): ಮೇಕೆದಾಟು (Mekedatu) ಪಾದಯಾತ್ರೆ ಕುರಿತು ಚರ್ಚಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಧ್ಯಕ್ಷತೆಯಲ್ಲಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಕನಕಪುರದ ನಿವಾಸದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

News Hour: ಕರ್ನಾಟಕದಲ್ಲಿ ವೀಕೆಂಡ್ ಲಾಕ್, ಪಾದಯಾತ್ರೆಗೆ ಸರ್ಕಾರದ ಶಾಕ್!

ಪಾದಯಾತ್ರೆಯ ಮೊದಲ ದಿನವಾದ ಜ.9ರಂದು ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ನಿಷೇಧಾಜ್ಞೆಯ ನಡುವೆ ಎಲ್ಲರೂ ಒಟ್ಟಾಗಿ ಪಾದಯಾತ್ರೆಯಲ್ಲಿ ಭಾಗವಹಿಸಲು ಅನುಮತಿ ದೊರೆಯುವುದಿಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯಬೇಕೆ ಅಥವಾ ಎಲ್ಲರೂ ಒಟ್ಟಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿ ಪೊಲೀಸರ ಕ್ರಮ ಎದುರಿಸಬೇಕೆ ಎಂಬುದನ್ನು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

'ಕಾನೂನು ಉಲ್ಲಂಘಿಸಿದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ನಿರ್ದಾಕ್ಷಿಣ್ಯ ಕ್ರಮ' ಎಂದು ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.