ನಾಳೆ ಹಮ್ಮಿಕೊಂಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ‌ ಹೈಕೋರ್ಟ್ ಬ್ರೇಕ್: ನೋಟಿಸ್‌ ಜಾರಿ

Mar 23, 2023, 6:22 PM IST

ಬೆಂಗಳೂರು (ಮಾ.23): ನಾಳೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ನಿಗಮಗಳ ನೌಕರರು ಕರೆ ಕೊಟ್ಟಿದ್ದ ಮುಷ್ಕರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ನೌಕರರು, ಇನ್ನೂ 3 ವಾರ ಮುಷ್ಕರ ಮಾಡದಂತೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಸರ್ಕಾರಿ ನೌಕರರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ನೌಕರರು ಸೇರಿದಂತೆ ವಿವಿಧ ನೌಕರರಿಗೆ ವೇತನವನ್ನು ಸರ್ಕಾರ ಹೆಚ್ಚಳ ಮಾಡಿ ಆದೇಶಿದಿದೆ. ಇನ್ನು ಸಾರಿಗೆ ನೌಕರರು ಕೂಡ ಶೇ.20 ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಸಾರ್ವಜನಿಕರಿಗೆ ಸಮಸ್ಯೆ ಆಗುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶೇ.15 ವೇತನ ಹೆಚ್ಚಳದ ಬಗ್ಗೆ ಭರವಸೆ ನೀಡಿ, ಈ ಸಂಬಂಧಪಟ್ಟಂತೆ ಹಣಕಾಸು ಇಲಾಖೆಗೂ ಸೂಚನೆ ನೀಡಲಾಗಿತ್ತು. ಆದರೆ, ಚಂದ್ರಶೇಖರ್‌ ಬಣದಿಂದ ನಮಗೆ ಶೇ.20 ವೇತನ ಹೆಚ್ಚಳ ಮಾಡಲೇಬೇಕು ಅಲ್ಲಿಯವರೆಗೂ ನಾವು ಮುಷ್ಕರ ಹಿಂಪಡೆಯುವುದಿಲ್ಲ. ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಆದರೆಮ ಇದಕ್ಕೆ ಹೈಕೋರ್ಟ್‌ ತಡೆಯನ್ನು ಒಡ್ಡಿದೆ.