'ಹಿಜಾಬ್ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ: ನ್ಯಾ ಕೃಷ್ಣ ದೀಕ್ಷಿತ್
ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ವಿಚಾರದಲ್ಲಿ (Hijab Row) ವೈಯಕ್ತಿಕ ಕಾನೂನು, ಮೂಲಭೂತ ಹಕ್ಕು ಸೇರಿದಂತೆ ಕೆಲ ಸಾಂವಿಧಾನಿಕ ಪ್ರಶ್ನೆಗಳು ಅಡಗಿರುವ ಹಿನ್ನೆಲೆಯಲ್ಲಿ ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಏಕ ಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿದೆ. ಅದರ ಬೆನ್ನಲ್ಲೆ ಈ ಸಂಬಂಧಿ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ತ್ರಿಸದಸ್ಯ ನ್ಯಾಯಪೀಠವೊಂದನ್ನು ರಚಿಸಿದೆ.
'ಹಿಜಾಬ್ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ. ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ ಎಂದು ನ್ಯಾ.ಕೃಷ್ಣ ದೀಕ್ಷಿತ್ ವ್ಯಕ್ತಪಡಿಸಿದರು. ಹೇಗಿತ್ತು ವಿಚಾರಣೆ..? ಇಲ್ಲಿದೆ ಡಿಟೇಲ್ಸ್