Oct 15, 2024, 8:30 PM IST
ರೇಣುಕಾಸ್ವಾಮಿ ಮರ್ಡರ್ ಕೇಸ್ ಬಗ್ಗೆ ಇಡಿ ರಾಷ್ಟ್ರವೇ ಕಣ್ಣರಳಿಸಿ ನೋಡ್ತಾ ಇದೆ. ಅಂಥದ್ರಲ್ಲಿ ರಾಜ್ಯದ ಬಗ್ಗೆ ಕೇಳ್ಬೇಕಾ? ಅದರಲ್ಲೂ ದರ್ಶನ್ ಅಭಿಮಾನಿಗಳ ಪಾಡು ಹೇಳ್ಬೇಕಾ? ಇಂಥದ್ದೊಂದು ಶಾಕಿಂಗ್ ನ್ಯೂಸ್ ಎದುರಾಗ್ಬೋದು ಅಂತ ದರ್ಶನ್ ಫ್ಯಾನ್ಸ್ ಊಹಿಸಿರ್ಲಿಲ್ಲ. ಆದರೆ, ಒಂದು ವೇಳೆ ಬೇಲ್ ಕನಸು ನನಸಾಗದೇ ಹೋದ್ರೆ, ಏನ್ ಮಾಡ್ಬೇಕು ಅನ್ನೋದರ ಬಗ್ಗೆಯೂ ಒಂದು ಚರ್ಚೆ ನಡೀದೆಯಂತೆ. ದರ್ಶನ್‌ಗೆ ಜಾಮೀನಂತೂ ಸಿಗಲಿಲ್ಲ. ಆದ್ರೆ ಈಗ, ಆರೋಗ್ಯ ಸಮಸ್ಯೆ ಇದೆ ಅನ್ನೋ ಕಾರಣ ಕೊಟ್ಟು, ಬಳ್ಳಾರಿ ಜೈಲಿಂದ ಬೆಂಗಳೂರಿಗಾದ್ರೂ ವಾಪಾಸ್ ಹೋಗೋಕೆ ಸಾಧ್ಯವಾಗುತ್ತಾ ಅಂತ ಪ್ರಯತ್ನ ಮಾಡ್ತಾ ಇದಾರಂತೆ..
ಡೆವಿಲ್ ಹೀರೋ ದರ್ಶನ್, ಯಾವುದು ಆಗಬಾರದು ಅಂತ ಕಾಯ್ತಾ ಇದ್ನೋ, ಕಡೆಗೂ ಅದೇ ಆಗಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದಾಸನಿಗೆ, ಬಳ್ಳಾರಿಯಲ್ಲಿ ಸೆರೆವಾಸವೇ ಮುಂದುವರೆದಿದೆ. ಇದು ಇಷ್ಟು ಸುಲಭವಾಗಿ ಮುಗಿಯೋ ಕತೆ ಅಲ್ಲ. ಹಾಗಂತ ಎಲ್ಲಿ ಮುಗಿದ ಹಾಗೆ ಕಾಣ್ತಾ ಇದೆಯೋ, ಅಲ್ಲೇ ಮುಗಿಯುವಂಥದ್ದೂ ಅಲ್ಲ. ಇದರ ಗುಟ್ಟೇನು ಅಂತ ಗೊತ್ತಾಗಬೇಕಿದ್ದರೆ, ನೀವು ಪ್ಲಾನ್ ಬಿ ಬಗ್ಗೆ ತಿಳ್ಕೊಬೇಕು.
ಜಾಮೀನು ಬೇಕು ಅಂತ ಕಾದು ಕೂತಿದ್ದ ಸಾರಥಿಗೆ, ಕೋರ್ಟ್ ಕೊಟ್ಟಿರೋದು ಅಗಾಧವಾದ ನಿರಾಸೆ. ಕಳೆದ ರಾತ್ರಿಯಂದಲೇ ನಿದ್ದೆಗೆಟ್ಟು ಅದೇ ಯೋಚನೇಲಿದ್ದ ದರ್ಶನ್ಗೆ ಬಿಗ್ ಶಾಕ್ ಎದಿರಾಗಿದೆ. ಬಳ್ಳಾರಿ ಜೈಲಿನಲ್ಲೇ ದಾಸನ ಸೆರೆವಾಸ ಮುಂದುವರಿಯಲಿದೆ. ಒಟ್ಟಾರೆ, ಡೆವಿಲ್ ಹೀರೋ ದರ್ಶನ್ ಹೆಗಲೇರಿರೋ ಕಂಟಕ, ಸುಲಭವಾಗಿ ನಿವಾರಣೆಯಾಗೋ ಲಕ್ಷಣವಂತೂ ಕಾಣ್ತಿಲ್ಲ. ಮುಂದೇನಾಗುತ್ತೋ ಕಾದು ನೋಡೋಣ.