Dec 13, 2024, 2:43 PM IST
ಬಳ್ಳಾರಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಈಗ ಕಾನೂನು ಸಮರಕ್ಕೆ ಮುಂದಾಗಿದೆ. ಇದೀಗ ಘಟನೆಯ ಕುರಿತು ಅರೋಗ್ಯ ಇಲಾಖೆ ಕಾನೂನು ಹೋರಾಟಕ್ಕೆ ಮುಂದಾಗಿದೆ. ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಕಂಪನಿಯ ಮೇಲೆ ಆರೋಗ್ಯ ಇಲಾಖೆ ಕೇಸ್ ಅನ್ನು ದಾಖಲಿಸಿದೆ. ಒಟ್ಟು 9 ಬ್ಯಾಚ್ ಔಷಧಗಳು ಸ್ಟ್ಯಾಂಡರ್ಡ್ ಕ್ವಾಲಿಟಿ ಇಲ್ಲ ಎಂದು ವರದಿ ಬಂದಿದೆ. ಡ್ರಗ್ ಕಂಟ್ರೋಲರ್, 9 ಬ್ಯಾಚ್ಗಳ ಮೇಲೆ ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಿದೆ. ಪಶ್ಚಿಮ್ ಬಂಗಾ ಫಾರ್ಮಾ ಕಂಪನಿ ಒಟ್ಟು 192 ಬ್ಯಾಚ್ ರಿಂಗರ್ ಲ್ಯಾಕ್ಟೇಟ್ ಪೂರೈಸಿದ್ದು, ಇದರಲ್ಲಿ 22 ಬ್ಯಾಚ್ NSQ ಎಂದು ಡ್ರಗ್ ಕಂಟ್ರೋಲ್ ವರದಿ ನೀಡಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.