Mar 31, 2022, 3:16 PM IST
ಬೆಂಗಳೂರು (ಮಾ. 31): ಮುಸ್ಲಿಮರ ಅಂಗಡಿಗಳಿಂದ ಹಲಾಲ್ ಮಾಂಸ ಖರೀದಿ ಮಾಡಬಾರದು ಎಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿರುವ ‘ಹಲಾಲ್ ಬಾಯ್ಕಾಟ್’ ಅಭಿಯಾನ ಮತ್ತಷ್ಟು ತೀವ್ರಗೊಂಡಿದೆ.
News Hour:ಕಲಾಪದಲ್ಲೂ ಹಲಾಲ್ ಪ್ರತಿಧ್ವನಿ.. ಇಬ್ರಾಹಿಂ ಹೇಳಿದ ವಿಧಾನ..!
ನೀವೂ ಜಾಗೃತರಾಗಿ, 10 ಜನರಿಗೆ ಈ ವಿಷಯ ತಿಳಿಸಿ. ಹಲಾಲ್ ಹಣ ಭಯೋತ್ಪಾದನಾ ಚಟುವಟಿಕೆಗೆ ಹೋಗುತ್ತಿದ್ದು ದೇಶಕ್ಕೆ ಮಾರಕವಾಗಿದೆ. ಹಿಂದೂಗಳು ಜಟ್ಕಾ ಮಾಂಸ ಮಾರಾಟ ಮಾಡಬೇಕು. ಯುಗಾದಿಯ ಹೊಸತೊಡಕಿಗೆ ಜಟ್ಕಾ ಮಾಂಸ ತಿನ್ನಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸತೊಡಗಿದ್ದಾರೆ.
ಹಿಂದೂ ಸಂಘಟನೆಗಳ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ದಾರೆ. 'ಕೊರೋನಾದಿಂದ ಜನ ಸಾಯುವಾಗ ವಿಹಿಂಪ, ಭಜರಂಗದವರು ಎಲ್ಲಿ ಹೋಗಿದ್ರು..? ಕೇಸರಿ ಬಟ್ಟೆ ಹಾಕಿಕೊಂಡು ಹಳ್ಳಿ ಹಳ್ಳಿಗಳಲ್ಲಿ ವಿಷಬೀಜ ಬಿತ್ತುತ್ತಿವೆ. ಸಿಎಂ ಬೊಮ್ಮಾಯಿಯವರೇ, ಗಂಡಸ್ತನ ಇದ್ದರೆ ಇದನ್ನೆಲ್ಲಾ ತಡೆಯಿರಿ ಎಂದು ಎಚ್‌ಡಿಕೆ ಸವಾಲು ಹಾಕಿದ್ದಾರೆ.