Oct 22, 2021, 3:33 PM IST
ಬೆಂಗಳೂರು (ಅ. 22): ಹಾನಗಲ್, ಸಿಂದಗಿ ಚುನಾವಣಾ ಕಣ ಮೂರು ಪಕ್ಷದ ನಾಯಕರ ಭರ್ಜರಿ ಪ್ರಚಾರದಿಂದ ರಂಗೇರಿದೆ. ಇಂದು ಹಾನಗಲ್‌ನಲ್ಲಿ ಬಸವರಾಜ್ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಜಂಟಿಯಾಗಿ ಪ್ರಚಾರ ನಡೆಸಿದರು. ಇನ್ನು ಸಿಂದಗಿಯಲ್ಲಿ ಎಚ್‌ಡಿಕೆ ಪ್ರಚಾರ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.'ಸಿಂದಗಿಯಲ್ಲಿ ಕಾಂಗ್ರೆಸ್‌ಗೆ ಬೇಸ್ ಇಲ್ಲ. ಇಲ್ಲೇನಿದ್ರೂ ಬಿಜೆಪಿ-ಜೆಡಿಎಸ್ ನಡುವೆ ಹೋರಾಟ. ಕಾಂಗ್ರೆಸ್ ಏನೇ ಅಪಪ್ರಚಾರ ಮಾಡಿದರೂ ನಮ್ಮ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾನಗಲ್‌ನಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್, ಮತದಾರರ ಮುಂದೆ ಹೊಸ ಸ್ಟ್ರಾಟಜಿ
ಆರ್‌ಎಸ್ಎಸ್ ಬಗ್ಗೆ ಸದ್ಯಕ್ಕೆ ಟೀಕೆಯನ್ನು ನಿಲ್ಲಿಸುವುದಿಲ್ಲ. ಆರ್‌ಎಸ್‌ಎಸ್ ಸೂರ್ಯನಷ್ಟೇ ಬೆಳಗುತ್ತಿದೆ ಎಂದು ಆ ಪಕ್ಷದವರು ಹೇಳುತ್ತಾರೆ. ಸೂರ್ಯನೂ ಸಂಜೆಯಾದ ಮೇಲೆ ತೆರೆಮರೆಗೆ ಹೋಗಬೇಕು' ಎಂದು ಎಚ್‌ಡಿಕೆ ಹೇಳಿದ್ದಾರೆ.