- ದರ್ಶನ್ ಆಸ್ತಿಪತ್ರ ನಕಲು ಮಾಡಿ ಬ್ಲಾಕ್‌ಮೇಲ್! ವಂಚನೆ ಯತ್ನ
- ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ಆಸ್ತಿ ದಾಖಲೆ ಬಳಸಿ 25 ಕೋಟಿ ರು. ಸಾಲಕ್ಕೆ ಅರ್ಜಿ
- ನಟನ ಸ್ನೇಹಿತರಿಂದ .25 ಲಕ್ಷ ಕೇಳಿದ್ದ ಅರುಣಾ ಪೊಲೀಸ್ ವಶಕ್ಕೆ
ಮೈಸೂರು (ಜು. 12): ನಟ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಅರುಣಾ ಕುಮಾರಿಯನ್ನು ಮೈಸೂರಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ವೈದ್ಯಕೀಯ ಪರೀಕ್ಷೆ ನಡೆಸಲಿದ್ದು, ಬಳಿಕ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.