ಒಮಿಕ್ರೋನ್ ಭೀತಿ (Omicron Variant) ಹಿನ್ನಲೆಯಲ್ಲಿ, ಹೊಸವರ್ಷಾಚರಣೆಗೆ (New Year 2022) ಹೊಸ ಗೈಡ್‌ಲೈನ್ಸ್ ಜಾರಿ ಮಾಡಲಾಗಿದೆ.
ಬೆಂಗಳೂರು (ಡಿ. 26): ಒಮಿಕ್ರೋನ್ ಭೀತಿ (Omicron Variant) ಹಿನ್ನಲೆಯಲ್ಲಿ, ಹೊಸವರ್ಷಾಚರಣೆಗೆ (New Year 2022) ಹೊಸ ಗೈಡ್‌ಲೈನ್ಸ್ ಜಾರಿ ಮಾಡಲಾಗಿದೆ. ಡಿ. 28 ರಿಂದ ಜನವರಿ 6 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ (Night Curfew) ವಿಧಿಸಲಾಗಿದೆ. ಸಾರ್ವಜನಿಕ ಸೆಲಬ್ರೇಶನ್‌ಗೆ ಬ್ರೇಕ್ ಹಾಕಲಾಗಿದೆ.
ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಸಿದ್ದರಾಮಯ್ಯ (Siddaramaiah) ಬೆಂಬಲ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದ ವೇಳೆ ಕೊರೊನಾ ಹರಡಬಹುದು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿ. ನಮ್ಮದೇನೂ ತಕರಾರಿಲ್ಲ. ಒಮಿಕ್ರೋನ್ ವೈರಸ್ ಹೆಚ್ಚಾಗುತ್ತಿದೆ. ಫೆಬ್ರವರಿಯಲ್ಲಿ ಇನ್ನಷ್ಟು ಹೆಚ್ಚಾಗುವುದು ಎಂದು ತಜ್ಞರು ಹೇಳಿರುವುದರಿಂದ ಇನ್ನಷ್ಟು ಕ್ರಮ ತೆಗೆದುಕೊಳ್ಳಲಿ. ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯವಸ್ಥೆ ಮಾಡಲಿ. ನಮ್ಮ ಬೆಂಬಲವಿದೆ' ಎಂದಿದ್ದಾರೆ.