ಈರುಳ್ಳಿ ಬೆಲೆ ಕೆಜಿಗೆ 100- 128 ಕ್ಕೆ ಏರಿದೆ. ಆದರೆ ಆ ಬೆಲೆ ರೈತರಿಗೆ ತಲುಪುತ್ತಿಲ್ಲ. ದಲ್ಲಾಳಿಗಳು ರೈತರಿಂದ ಕ್ವಿಂಟಾಲ್‌ಗೆ 3 ಸಾವಿರದಿಂದ 4 ಸಾವಿರದ ಒಳಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ರೈತನಿಗೆ ಕೆಜಿಗೆ 30-40 ರೂಪಾಯಿ ಸಿಗುತ್ತಿದೆ.
ಬೆಂಗಳೂರು (ಅ. 28): ಈರುಳ್ಳಿ ಬೆಲೆ ಕೆಜಿಗೆ 100- 128 ಕ್ಕೆ ಏರಿದೆ. ಆದರೆ ಆ ಬೆಲೆ ರೈತರಿಗೆ ತಲುಪುತ್ತಿಲ್ಲ. ದಲ್ಲಾಳಿಗಳು ರೈತರಿಂದ ಕ್ವಿಂಟಾಲ್‌ಗೆ 3 ಸಾವಿರದಿಂದ 4 ಸಾವಿರದ ಒಳಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ರೈತನಿಗೆ ಕೆಜಿಗೆ 30-40 ರೂಪಾಯಿ ಸಿಗುತ್ತಿದೆ.
ರೈತರು ನೇರವಾಗಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ದಲ್ಲಾಳಿಗಳು ಕಡಿಮೆ ಬೆಲೆಗೆ ಕೊಂಡು 100 ರೂ.ನಂತೆ ಮಾರಾಟ ಮಾಡಿ ಹಣ ಗಳಿಸಿಕೊಳ್ಳುತ್ತಿದ್ದಾರೆ. ರೈತನಿಗೆ ಹಾಕಿದ ಬಂಡವಾಳವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ.