ಧಮ್ಕಿ ಹಾಕೋದು ಸರಿಯಲ್ಲ, ನಾವೂ ಕೈಗೆ ಬಳೆ ತೊಟ್ಟು ಕೂತಿಲ್ಲ: ಪ್ರತಾಪ್‌ ಸಿಂಹಗೆ ತನ್ವೀರ್ ಉತ್ತರ

Sep 9, 2021, 4:28 PM IST

ಮೈಸೂರು (ಸೆ. 09): ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯಾಚರಣೆಗೆ ಕೆಡಿಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ.  'ಫುಟ್‌ಪಾತ್‌ನಲ್ಲಿ ದರ್ಗಾ ಇಲ್ವಾ? ಚರ್ಚ್‌ನವರು ಒತ್ತುವರಿ ಮಾಡಿಲ್ವಾ? ಕೆರೆ, ವಸತಿ ಪ್ರದೇಶದಲ್ಲಿ ಮಸೀದಿ ಕಟ್ಟೋದು ಕಾಣಲ್ವಾ.? ಎಂಬ ಹೇಳಿಕೆಗೆ ತನ್ವೀರ್ ಸೇಠ್ ಗರಂ ಆಗಿದ್ಧಾರೆ. 

ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಗರಂ

ಅರಸು ರಸ್ತೆಯ ದರ್ಗಾ ಮೊದಲು ಬಂತಾ? ರಸ್ತೆ ಮೊದಲು ಬಂತಾ? ಆ ದರ್ಗಾ ಇದ್ದಿದ್ದು ಮನೆಯಲ್ಲಿ. ಬಳಿಕ ಅಲ್ಲಿ ರಸ್ತೆ ಆಗಿದೆ. ಇದನ್ನು ಕೋರ್ಟ್ ಬಗೆಹರಿಸುತ್ತದೆ. ರಾಜಕೀಯ ಬೇಡ' ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದ್ದು ಸರಿಯಲ್ಲ. ನಾವೂ ಕೈಗೆ ಬಳೆ ತೊಟ್ಟು ಕೂತಿಲ್ಲ. ಈ ರೀತಿ ಪ್ರಚೋದನೆ ಕೊಡುವುದು ಸರಿಯಲ್ಲ' ಎಂದಿದ್ದಾರೆ.