Vegetables Price: ಇನ್ನು 2 ತಿಂಗಳು ತರಕಾರಿ ಬೆಲೆ ಬಿಲ್‌ಕುಲ್ ಇಳಿಯಲ್ಲ..!

Dec 12, 2021, 1:33 PM IST

ಬೆಂಗಳೂರು (ಡಿ. 12): ನಿರಂತರ ಮಳೆಯಿಂದಾಗಿ (Rain) ಬೆಳೆಗಳು ನೆಲಕಚ್ಚಿದ್ದು, ಎಲ್ಲ ತರಕಾರಿಗಳು  (Vegitables) ಬೆಲೆ ಗಗನಕ್ಕೇರಿವೆ. ಈ ಏರಿಕೆ ಮತ್ತಷ್ಟುಕಾಲ ಮುಂದುವರೆಯುವ ಲಕ್ಷಣಗಳಿವೆ. ಕ್ಯಾಪ್ಸಿಕಂ, ಕ್ಯಾರೆಟ್‌, ನುಗ್ಗೇಕಾಯಿ, ಟೊಮೆಟೋ ಮತ್ತಿತರ ಅಗತ್ಯ ತರಕಾರಿಗಳ ಬೆಲೆ ಕಡಿಮೆ ಆಗಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗಬಹುದು.

Bitcoin Scam: ಬೇಲ್ ಪಡೆದು ಹೊರಬಂದ ಶ್ರೀಕಿ ನಾಪತ್ತೆ, ಮತ್ತೆ ಸಂಕಷ್ಟ ಶುರು..?

ತರಕಾರಿಗಳ ಪೂರೈಕೆಯೂ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ ನಗರಕ್ಕೆ ತರಕಾರಿ ಪೂರೈಕೆಯಾಗುವ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆ ಮಳೆಯಿಂದಾಗಿ ಹಾಳಾಗಿರುವುದು ಮುಖ್ಯ ಕಾರಣ.ಮಳೆ ಕಡಿಮೆ ಆಗಿದ್ದರಿಂದ ಮುಂದಿನ 3-4 ವಾರಗಳಲ್ಲಿ ಬೀನ್ಸ್‌, ಬಿಟ್‌ರೂಟ್‌, ಮೂಲಂಗಿ ಹಾಗೂ ಸೊಪ್ಪುಗಳ ಪೂರೈಕೆ ಹೆಚ್ಚಾಗಿ ದರ ಕಡಿಮೆಯಾಗಬಹುದು. ರೈತರು ಬೆಳೆ ಬೆಳೆದು ಗ್ರಾಹಕರಿಗೆ ಒದಗಿಸಬೇಕಾದ ಅನಿವಾರ್ಯತೆ ಇದೆ.