Jun 9, 2023, 12:51 PM IST
ಈ ವರ್ಷದ ಮಳೆಗಾಲ ಯಾಕೋ ಅನುಕೂಲಕರವಾಗಿಲ್ಲ ಎಂದೆನಿಸುತ್ತಿದೆ. ಬರಬೇಕಿದ್ದ ಮುಂಗಾರು ಇನ್ನೂ ಬರುತ್ತಲೇ ಇಲ್ಲ. ಮಳೆ ಬದಲಾಗಿ ಮೂರು ರಾಜ್ಯಗಳಲ್ಲಿ ಸೈಕ್ಲೋನ್ ಅಬ್ಬರ ಶುರುವಾಗಿದೆ. ಹಾಗೆನೇ ಇನ್ನೊಂದು ಅಚ್ಚರಿ ಏನೆಂದ್ರೆ ಮಳೆಗಾಲದಲ್ಲು ಸಹ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರಗಾಲ . ರಾಜ್ಯದಲ್ಲಿ ಈಗಾಗ್ಲೇ ಮಳೆ ಸುರಿದು ಎಲ್ಲೆಲ್ಲು ಹಸಿರು ತುಂಬಿರಬೇಕಿತ್ತು. ಆದ್ರೆ, ರಾಜ್ಯದಲ್ಲಿ ಮಳೆನೂ ಇಲ್ಲ. ಹಸಿರೂ ಇಲ್ಲ. ಬದಲಾಗಿ ಮಳೆಗಾಲದಲ್ಲೂ ರಣ ರಣ ಬಿಸಿಲು, ನೀರಿಗಾಗಿ ಆಹಾಕಾರವಾಗಿದೆ. ಸರಿಯಾದ ಸಮಯಕ್ಕೆ ಮುಂಗಾರು ಬಾರದೇ ಇದ್ದಿದ್ದಕ್ಕೆ ರಾಜ್ಯದ ಜನ ತುಂಬಾನೇ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಆರಂಭವಾಗದೇ ಇದ್ರೆ ರಾಜ್ಯ ದೊಡ್ಡ ತೊಂದರೆಗೆ ಸಿಕ್ಕಿಕೊಳ್ಳುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಏನಾಗಿದೆ ಮಳೆಗಾಲಕ್ಕೆ..? ಈ ವಿಡಿಯೋದಲ್ಲಿ ನೋಡಿ