ವೈದ್ಯಕೀಯ ಓದು, ರಾಜಕೀಯ ಅನುಭವ, ಡಾ. ಸುಧಾಕರ್ ಬೆಸ್ಟ್ ಆಗಿದ್ಹೇಗೆ.?

Oct 4, 2021, 5:59 PM IST

ಬೆಂಗಳೂರು (ಅ. 04): 1.5 ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್‌ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ಆಕ್ಸಿಜನ್‌-ವೆಂಟಿಲೇಟರ್‌ ಸೌಲಭ್ಯ, ಲಸಿಕೆ ಅಭಿಯಾನ, ಪರೀಕ್ಷೆ ಹೆಚ್ಚಳ ಮತ್ತಿತರೆ ಕ್ರಮಗಳ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ತರಲಾಗಿದೆ.

ಕೋವಿಡ್ ನಿಯಂತ್ರಣ: ಕರ್ನಾಟಕಕ್ಕೆ'ಅತ್ಯುತ್ತಮ ರಾಜ್ಯ ಪ್ರಶಸ್ತಿ' ಅವಾರ್ಡ್

 ಕರ್ನಾಟಕಕ್ಕೆ ‘ಕೋವಿಡ್‌-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಲಭಿಸಿದೆ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಸಮೂಹ ‘ಇಂಡಿಯಾ ಟುಡೇ ಹೆಲ್ತ್‌ಗಿರಿ’ ಪ್ರಶಸ್ತಿಯನ್ನು ರಾಜ್ಯಕ್ಕೆ ನೀಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ರಾಜ್ಯ ಸರ್ಕಾರದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಡಾ. ಸುಧಾಕರ್ ಅವರ ಮುಂದಾಲೋಚನೆ, ಮುಂಜಾಗ್ರತಾ ಕ್ರಮಗಳು, ಸಮರ್ಥವಾದ ಕೆಲಸ ರಾಜ್ಯವನ್ನು ನಂ 1 ಆಗಿಸಿದೆ. ಹಾಗಾದರೆ ಸುಧಾಕರ್ ಹಾಗೂ ಅವರ ತಂಡದ ಕೆಲಸ ಹೇಗಿತ್ತು..? ಇಲ್ಲಿದೆ ವಿಶೇಷ ವರದಿ.