Jun 5, 2021, 1:36 PM IST
ಬೆಂಗಳೂರು (ಜು. 05): ಮಕ್ಕಳಲ್ಲಿ ಸೋಂಕು ತಗುಲದಂತೆ ಮಾಡಲು ವೈದ್ಯರಿಂದ ಸಂಶೋಧನೆ ನಡೆಯುತ್ತಿದೆ. ತಡೆಗೆ ಪೊಲೀಯೋ ಲಸಿಕೆ ರಾಮಬಾಣವಾಗುತ್ತಾ ಎಂದು ಐದು ಜನ ವೈದ್ಯರ ತಂಡ ಸಂಶೋಧನೆ ನಡೆಸುತ್ತಿದ್ದಾರೆ.
ಕೊರೋನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C ಸಿಂಡ್ರೋಮ್
ಕೊರೋನಾ ತಜ್ಞರ ತಂಡದ ವೈದ್ಯ ಡಾ. ವಿಶಾಲ್ ರಾವ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪೊಲೀಯೋ ಲಸಿಕೆ ನೀಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಸೋಂಕು ತಡೆಯಲು ನೆರವಾಗುತ್ತದೆ ಎಂದು ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ಈ ಪ್ರಯೋಗದ ಬಗ್ಗೆ ವೈದ್ಯ ವಿಶಾಲ್ ರಾವ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.