ಕೆಂಪುಕೋಟೆ ಮೇಲೆ ಕೇಸರಿ ಧ್ವಜ: ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡುವಂತೆ ಡಿಕೆಶಿ ಆಗ್ರಹ

Feb 15, 2022, 9:59 AM IST

ಭಾರತದ ರಾಷ್ಟ್ರ ಧ್ವಜ ಬದಲಾವಣೆ ಮಾಡುತ್ತೇವೆ. ದೆಹಲಿಯ ಕೆಂಪು ಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಅವರ ವಿರುದ್ಧ ಕೂಡಲೇ ‘ದೇಶದ್ರೋಹ’ದ ಕೇಸು ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

Hijab Row: ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ವಿಚಾರಣೆ ಬೇಡ, ಹೈಕೋರ್ಟ್‌ಗೆ ಅರ್ಜಿ

 ರಾಷ್ಟ್ರಧ್ವಜ ಬದಲಾಯಿಸುವ ಹೇಳಿಕೆ ನೀಡಿರುವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾ ಮಾಡಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಮುಗ್ಧ ರೈತರ ಮೇಲೇ ದೇಶದ್ರೋಹ ಕೇಸು ದಾಖಲಿಸುತ್ತೀರಿ, ಇಂತಹ ಹೇಳಿಕೆ ನೀಡುವ ಈಶ್ವರಪ್ಪ ಅವರ ಮೇಲೆ ಏಕೆ ಹಾಕಿಲ್ಲ. ಅವರ ವಿರುದ್ಧವೂ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. 

ಯಾರ ಮನಸ್ಸನ್ನೂ ನೋಯಿಸುವ ಅಥವಾ ಅಗೌರವ ತೋರಿಸುವ ದುರುದ್ದೇಶದಿಂದ ನಾನು ಆ ರೀತಿ ಹೇಳಿಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವ ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ' ಎಂದು ಜಮೀರ್ ಖಾನ್ ಕ್ಷಮೆಯಾಚಿಸಿದ್ದಾರೆ.