Dec 27, 2021, 5:04 PM IST
ಬೆಂಗಳೂರು (ಡಿ. 27): ರಾಜ್ಯದಲ್ಲಿ ಕೊರೋನಾ ರೂಪಾಂತರ ತಳಿ ಒಮಿಕ್ರೋನ್ ಪ್ರಕರಣ ಹರಡುವಿಕೆ ತಡೆಯಲು ರಾಜ್ಯಾದ್ಯಂತ ಡಿ. 28ರಿಂದ ಜನವರಿ 7 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ (Night Curfew) ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ, ಸಭೆ, ಸಮಾರಂಭಗಳಲ್ಲಿ ಜನರ ಸೇರುವಿಕೆಗೆ ಸಂಖ್ಯಾ ಮಿತಿ ಸೇರಿದಂತೆ ಹಲವು ನಿರ್ಬಂಧಗಳನ್ನು ರಾಜ್ಯ ಸರ್ಕಾರ ವಿಧಿಸಿದೆ.
New Year 2022: ಪಾಸ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ
'ನೈಟ್ ಕರ್ಫ್ಯೂ ಹೇರಿರುವುದು ಅನಿವಾರ್ಯ ಸರಿ. ನೈಟ್ ಕರ್ಫ್ಯೂ ಚುನಾವಣೆ ಇದ್ದಾಗ ಏಕೆ ಹಾಕುವುದಿಲ್ಲ.? ನೀವು ನಮಗೆ ಬೇಕಾದ ಹಾಗೆ ನಿರ್ಬಂಧಗಳನ್ನು ಹೇರುತ್ತೀರಿ. ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತೀರಿ. ಕೊರೊನಾ ಟೈಂನಲ್ಲಿ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿದೆ.