ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!

ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!

Published : Oct 08, 2023, 02:20 PM IST

ಒಂದು ಕಡೆ ಕೊಡ್ತಾರೆ.. ಇನ್ನೊಂದು ಕಡೆ ಕಿತ್ಕೊತಾರೆ!
ಉದ್ಯೋಗ ಸೃಷ್ಟಿಗೆ ಬಾರ್ ತೆಗೆಯೋದು ಬೇಕಿಲ್ಲವೆಂದ ಜನ!
ಸರ್ಕಾರದ ದ್ವಂದ್ವ ನಿಲುವು.. ಯಾವುದರ ಸುಳಿವು..?

ಮದ್ಯದಂಗಡಿ ತೆರೆಯೋದಕ್ಕೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಉತ್ಸುಕರಾದ ಹಾಗೆ ಕಾಣ್ತಾ ಇದೆ. ಆದ್ರೆ ಸಿಎಂ ಸಾಹೇಬರು ಮಾತ್ರ, ಈ ನಿರ್ಧಾರಕ್ಕೆ ವಿರೋಧ ದಿಕ್ಕಲ್ಲಿ ಯೋಚಿಸ್ತಾ ಇದಾರೆ. ಜನಕ್ಕೆ ಯಾವ್ದು ಅನುಕೂಲನೋ, ಯಾವ್ದು ಶಾಪಾನೋ, ಜನರೇ ಡಿಸೈಡ್ ಮಾಡ್ತಾರೆ ಅಂತಿದ್ದಾರೆ. ಸಿದ್ದರಾಮಯ್ಯ(Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟು, ಜನಮನ ಗೆದ್ದಿದೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಂತೂ ಜನರ ಕಣ್ಣಿಗೆ ಎದ್ದು ಕಾಣ್ತಿದ್ದಾವೆ. ಆದ್ರೆ, ಈಗಷ್ಟೇ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್‌ಗೆ ಸಾಲು ಸಾಲು ಸವಾಲುಗಳು ಸಹ ಎದುರಾಗ್ತಾ ಇದಾವೆ. ಅಂಥಾ ಸವಾಲಿನ ಪಟ್ಟಿಗೆ ಈಗ ಹೊಸದೊಂದು ಗೊಂದಲ ಸೇರ್ಪಡೆಯಾಗಿದೆ. ಅದೇ ಮದ್ಯದ ಲೈಸೆನ್ಸ್ ವಿಚಾರ. ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಳೆದ 30 ವರ್ಷಗಳಿಂದ ಬಾರ್ ಲೈಸೆನ್ಸ್(Bar license) ಕೊಟ್ಟೇ ಇಲ್ಲ. ಹಾಗಾಗಿ, ಈಗ ಮತ್ತೆ ಲೈಸೆನ್ಸ್ ಕೊಟ್ರೆ ಒಳ್ಳೇದು ಅನ್ನೋ ಮಾತಾಡ್ತಾ ಇದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯದಂಗಡಿ ಓಪನ್ ಮಾಡೋಕೆ ಅವಕಾಶ ಕೊಡೋಕೆ ಸರ್ಕಾರ ಸಿದ್ಧವಾಗಿತ್ತಂತೆ. ಹೊಸದಾಗಿ 389 ಮದ್ಯದಂಗಡಿ ತೆರೆಯೋದಕ್ಕೆ ರಾಜ್ಯ ಸರ್ಕಾರದ ಪ್ಲಾನ್ ಮಾಡ್ಕೊಂಡಿದೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಈ ಮಾತೇ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಜಿಲ್ಲೆ ಜಿಲ್ಲೆಯಲ್ಲೂ ಮಹಿಳೆಯರು ದಂಗೆ ಎದ್ದಿದ್ರು. ಪ್ರತಿಭಟನೆ ಕಹಳೆ ಮೊಳಗಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದರು. ಈ ಹೋರಾಟ, ಆಕ್ರೋಶಗಳ ಮಧ್ಯೆನೇ ಸಿಎಂ ಸಿದ್ದರಾಮಯ್ಯ ಹೊಸದಾಗಿ ಯಾವುದೇ ಬಾರ್ ತೆರೆಯಲ್ಲ ಅನ್ನೋ ಭರವಸೆ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಅನೇಕಲ್‌ ಪಟಾಕಿ ದುರಂತಕ್ಕೆ ಕಾರಣವೇನು ? ಬಾಕ್ಸ್‌ ಶಿಫ್ಟ್‌ ಮಾಡುವಾಗಲೇ ಆಯಿತಾ ಯಡವಟ್ಟು ?

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more