
ನಟ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ ಕಾಡಿನಲ್ಲಿಟ್ಟಿದ್ದನು. ರಾಜ್‌ಕುಮಾರ್ ಅವರನ್ನು ಹೊರ ತರುವುದಕ್ಕೆ ಎಸ್.ಎಂ ಕೃಷ್ಣ ಅವರು ಪ್ರಯತ್ನ ಮಾಡಿದ್ದರು.
ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಕರುನಾಡಿಗೆ ಹಲವು ಕೊಡುಗೆಗಳನ್ನ ಕೊಟ್ಟಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಕೂಡ ಕೃಷ್ಣರಿಂದ ಒಂದು ಬಹುಮುಖ್ಯವಾದ ಕೊಡುಗೆ ಇದೆ. ವರನಟ ಡಾ.ರಾಜ್ಕುಮಾರ್ರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದಾಗ, ಎಸ್.ಎಂ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ರು. ಅಣ್ಣಾವ್ರನ್ನ ನರಹಂತಕನ ಕೈಯಿಂದ ಬಚಾವ್ ಮಾಡಿ ತರುವ ಗುರುತರ ಜವಾಬ್ದಾರಿ ಕೃಷ್ಣ ಮೇಲಿತ್ತು.. ಆ ಸವಾಲನ್ನ ಕೃಷ್ಣ ಎದುರಿಸಿದ್ದು ಹೇಗೆ..? ಆ 108 ದಿನಗಳ ಕಾಲ ಏನೆಲ್ಲಾ ನಡೀತು..? ರಜನಿಕಾಂತ್ , ಅಂಬರೀಷ್ ಜೊತೆ ಎಸ್.ಎಂ ಕೃಷ್ಣ ಮಾಡಿಕೊಂಡ ಒಪ್ಪಂದ ಏನಿತ್ತು..? ಆ ಕುರಿತ ಅಪರೂಪದ ಸ್ಟೋರಿ ಇಲ್ಲಿದೆ ನೋಡಿ.