
ಧರ್ಮಸ್ಥಳದಲ್ಲಿ ಅನಾಮಧೇಯ ವ್ಯಕ್ತಿ ಗುರುತಿಸಿದ ಸ್ಥಳಗಳಲ್ಲಿ ಸಮಾಧಿಗಳನ್ನು ಅಗೆಯಲಾಗುತ್ತಿದೆ. ಈ ಪ್ರಕರಣವು ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ತನಿಖೆ ಮುಂದುವರೆದಿದೆ. ಕೆಲವು ಗುರುತಿನ ಚೀಟಿಗಳು ಪತ್ತೆಯಾಗಿವೆ ಎನ್ನಲಾಗಿದ್ದು, SIT ಸ್ಪಷ್ಟನೆ ನೀಡಬೇಕಿದೆ.
ಒಂದೊಂದು ಹಂತ. ಒಂದೊಂದು ಕ್ಷಣ. ಎಲ್ಲವೂ ಕೌತುಕ ರಣಕೌತುಕ. ಯಾಕೆಂದ್ರೆ ಇಡೀ ಕರುನಾಡೇ ಹಿಂದೆಂದೂ ಕಂಡು ಕೇಳರಿಯದ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ. ಅನಾಮಿಕ ಗುರುತಿಸಿದ ಜಾಗದಲ್ಲಿ ಸಮಾಧಿ ಅಗೆಯೋ ಕೆಲಸ ಶುರುವಾಗಿದೆ. ಒಂದು ಕಡೆ ಸಮಾಧಿ ಅಗೆಯೋ ಕಾರ್ಯಚರಣೆ ನಡೀತಾಯಿದ್ರೆ, ಇನ್ನೊಂದು ಕಡೆ ಇದೇ ಧರ್ಮಸ್ಥಳದ ವಿಚಾರವಾಗಿ ರಾಜಕೀಯ ಜಟಾಪಟಿಯು ಜೋರಾಗಿದೆ. ದಾಳಿ-ವಾಗ್ದಾಳಿಗಳೂ ತಾರಕಕ್ಕೇರಿವೆ. ಅನಾಮಿಕ ಗುರುತಿಸಿರುವ 13 ಸ್ಥಳಗಳಲ್ಲಿ ಒಟ್ಟು 5 ಕಡೆ ಈಗಾಗಲೇ ಸಮಾಧಿ ಅಗೆಯಲಾಗಿದ್ದು, ಇಲ್ಲಿವರೆಗೆ ಯಾವುದೇ ಕಳೆಬರಹ ಸಿಕ್ಕಿಲ್ಲ. ಆದರೆ ಕೆಲವು ಗುರುತಿನ ಚೀಟಿಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಸ್ಪಷ್ಟನೆ ನೀಡಬೇಕಿದೆ.