
ಗುಂಡಿ ಪಾಯಿಂಟ್ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್ ಅಪ್ಡೇಟ್ಸ್ ಏನು.?
ಬಾಯಿಗೆ ಬಂದಂತೆ ಆರೋಪಗಳನ್ನ ಮಾಡಿ. AI ವಿಡಿಯೋಗಳನ್ನ ವೈರಲ್ ಮಾಡಿ ಧರ್ಮಸ್ಥಳ ಅನ್ನೋ ಪವಿತ್ರ ಕ್ಷೇತ್ರದ ವಿರುದ್ಧ ಜನರನ್ನ ಎತ್ತಿಕಟ್ಟಿದ್ದ ಧರ್ಮಸ್ಥಳ ವಿರೋಧಿ ಗ್ಯಾಂಗ್ನ ಅಸಲಿ ಕಹಾನಿ ಈಗ ಬಯಲಾಗ್ತಿದೆ. ಅವರು ಮಾಡಿದ್ದ ಷಡ್ಯಂತ್ರ, ಪಿತೂರಿ ಎಲ್ಲವೂ ಜನರಿಗೆ ಗೊತ್ತಾಗಿಬಿಟ್ಟಿದೆ. ಥ್ಯಾಂಕ್ಸ್ ಟು SIT ಟೀಂ. ಆರಂಭದಲ್ಲಿ ಚಿನ್ನಯ ತೋರಿಸಿದ ಜಾಗದಲ್ಲೆಲ್ಲಾ ಭೂಮಿಯನ್ನ ಅಗೆದಿದ್ದ ತಂಡ. ಈಗ ಅದೇ ಚಿನ್ನಯನಿಗೆ ಕ್ಲಾಸ್ ತಗೆದುಕೊಳ್ತಿದೆ. ಅಷ್ಟೇ ಅಲ್ಲ ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ಜಯಂತ್ ಮನೆಯಲ್ಲಿ ಶೋಧ ನಡೆಸಲಾಯ್ತು. ಆಗಲೇ ಚಿನ್ನಯ ತಂದಿದ್ದ ಬುರುಡೆ ಜಯಂತ್ ಮನೆಯಲ್ಲಿತ್ತು ಅಂತ ಗೊತ್ತಾಗಿತ್ತು. ಈಗ ಚಿನ್ನಯ ಪೊಲೀಸರೆದುರು ಬರೋದಕ್ಕೂ ಮೊದಲು ಈ ಗ್ಯಾಂಗ್ ಜೊತೆ ಸೇರಿ ಏನೆಲ್ಲಾ ಮಾಡಿದ್ದ.
ಗುಂಡಿ ಪಾಯಿಂಟ್ ಮಾಡಲು ಅವರು ಮಾಡಿದ್ದ ತಯಾರಿ ಎಂಥದ್ದು ಅನ್ನೋದೆಲ್ಲಾ ಬಯಲಾಗಿದೆ. ಹಾಗಿದ್ರೆ ಧರ್ಮಸ್ಥಳ ಬುರುಡೆ ಪ್ರಕರಣದ ಲೇಟೆಸ್ಟ್ ಅಪ್ಡೇಟ್ಸ್ ಏನು.? ತನಿಖೆ ಎಲ್ಲಿವರಗೆ ಬಂದಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್. ಈ ಗ್ಯಾಂಗ್ ಯಾವಾಗ ಬೇಕಾದ್ರೂ ಅರೆಸ್ಟ್ ಆಗಬಹುದು.. ಅದಕ್ಕೆ ಎಲ್ಲಾ ತಯಾರಿಯನ್ನ SIT ಮಾಡಿಕೊಳ್ತಿದೆ. ಇನ್ನೂ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಬುರುಡೆ ಕಹನಿಗೆ ಪೊಲಿಟಿಕಲ್ ಫೈಟ್ ಸೇರಿಕೊಂಡಿದ್ದೇಗೆ..? ಷಡ್ಯಂತ್ರ ಅನ್ನೋ ಪದ ಮೊದಲು ಬಳಸಿದ್ದೇ ಡಿಸಿಎಂ ಡಿಕೆಶಿ. ನಂತರ ಸದನದಲ್ಲಿ ಮಾತಿಗೆ ಮಾತು. ಗೃಹಸಚಿವರಿಂದ ಸಮಾದಾನದ ಉತ್ತರ. ಇದೆಲ್ಲಾ ಆದ ಮೇಲೆ ಈಗ ಧರ್ಮಸ್ಥಳ ಚಲೋ ಕಾರ್ಯಕ್ರಮಗಳು. ನಿನ್ನೆ ಜೆಡಿಎಸ್ ಹೋಗಿ ಬಂದ್ರೆ ಇವತ್ತು ಬಿಜೆಪಿಯ ಸರದಿ.
ಸಮಾವೇಷ ಮಾಡ್ತೀವಿ ಅಂತ ಹೋದ ಬಿಜೆಪಿ ನಾಯಕರ ಮಧ್ಯೆ ಒಳಜಗಳವೂ ನಡೆದು ಹೊಯ್ತು. ಇನ್ನೂ ಇವರುಗಳ ಸಮಾವೇಷಕ್ಕೆ ಕಾಂಗ್ರೆಸ್ ಕೌಂಟರ್. ಒಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಯುದ್ಧದಲ್ಲಿ ರಾಜಕೀಯದಾಟವೂ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ಎನ್ಐಎ ತನಿಖೆಯಾಗಬೇಕು ಅಂತಾ ಪಟ್ಟುಹಿಡಿದಿರೋ ಬಿಜೆಪಿ ಸರಣಿ ಹೋರಾಟ ನಡೆಸುತ್ತಿದ್ರೆ, ಕಾಂಗ್ರೆಸ್ ಮಾತ್ರ ಎಸ್ಐಟಿ ತನಿಖೆಯಿಂದಲೇ ಸತ್ಯ ಹೊರಬರಲಿದೆ ಅಂತಾ ಬಿಗಿನಿಲುವು ತಾಳಿದೆ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಧರ್ಮಯುದ್ಧ ತಾರಕಕ್ಕೇರುತ್ತಲೇ ಇದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡೋಣ.