ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ಆಗಾಗ ಧ್ವನಿಸುತ್ತಿರುತ್ತದೆ. ಇದೀಗ ಜಿ ಪರಮೇಶ್ವರ್ ಮತ್ತೆ ದಲಿತ ಸಿಎಂ ಕಿಚ್ಚು ಹೆಚ್ಚಿಸಿದ್ದಾರೆ.
ಬೆಂಗಳೂರು (ನ. 14): ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ( Dalit CM) ಕೂಗು ಆಗಾಗ ಧ್ವನಿಸುತ್ತಿರುತ್ತದೆ. ಇದೀಗ ಜಿ ಪರಮೇಶ್ವರ್ (G Parameshwar) ಮತ್ತೆ ದಲಿತ ಸಿಎಂ ಕಿಚ್ಚು ಹೆಚ್ಚಿಸಿದ್ದಾರೆ.
ರಾಹುಲ್ ಗಾಂಧಿ ನೀವು ಏನಾಗಬೇಕು ಎಂದು ಕೇಳಿದರು. ತಕ್ಷಣವೇ ನಾನು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದೆ. ಮಂತ್ರಿ ಆಗೋ ಆಸೆ ಇಲ್ಲ, ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದೆ. ನಾನು ಮುಖ್ಯಮಂತ್ರಿ ಆಗಬಹುದು ಅಥವಾ ಆಗದೇ ಇರಬಹುದು. ಈ ಮಾತಿನಿಂದ ಇಂದು ಎಲ್ಲಿ ನೋಡಿದರೂ ದಲಿತ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿದೆ. ದಲಿತ ಸಿಎಂ ಬಗ್ಗೆ ಇಷ್ಟ ಇರೋರು, ಇಷ್ಟ ಇಲ್ಲದೆ ಇರೋರು ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಮುಂದಿನ ದಿನಗಳಲ್ಲಿ ನೋಡೋಣ ಅದೃಷ್ಟ ತಾಯಿ ಯಾರಿಗೆ ಒಲಿಯುತ್ತಾಳೆ ಗೊತ್ತಿಲ್ಲ. ದಲಿತರ ಒಗ್ಗಟ್ಟು ಹೋರಾಟ ಆಗಬೇಕೆಂದು ಜಿ.ಪರಮೇಶ್ವರ್ ಹೇಳಿದರು.