ಅಶ್ಲೀಲ ಸಂಘರ್ಷ: ಹೆಬ್ಬಾಳ್ಕರ್‌ಗೊಂದು ಕಾನೂನು..? ಸಿಟಿ ರವಿಗೊಂದು ಕಾನೂನಾ..?

Dec 23, 2024, 11:10 PM IST

ಬೆಂಗಳೂರು (ಡಿ.23): ಅಶ್ಲೀಲ ಪದದ ಸಂಘರ್ಷದ ವಿಚಾರದಲ್ಲಿ ಬೆಳಗಾವಿ ಪೊಲೀಸರ ನಡೆಯ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೊಂದು ಕಾನೂನು..? ಸಿಟಿ ರವಿಗೊಂದು ಕಾನೂನಾ..? ಇದ್ಯಾ ಎನ್ನುವ ಬಂದಿದೆ. ಡಿಸೆಂಬರ್ 19ಕ್ಕೆ ಹೆಬ್ಬಾಳ್ಕರ್​ ದೂರು ನೀಡ್ತಿದ್ದಂತೆ ಖಾಕಿ ಅಲರ್ಟ್ ಆಗಿತ್ತು.

4 ಗಂಟೆಗೆ ನೀಡಿದ ದೂರಿಗೆ 5 ಗಂಟೆಗೆ ಎಫ್​ಐಆರ್ ಆಗಿ, 6 ಗಂಟೆಗೆಲ್ಲಾ ಸಿಟಿ ರವಿ ಬಂಧನವಾಗಿತ್ತು. ಆದರೆ, ಡಿಸೆಂಬರ್ 19ಕ್ಕೆ ಸಿಟಿ ರವಿ ದೂರು ಕೊಟ್ಟರೂ ಎಫ್​ಐಆರ್ ಆಗಿರಲಿಲ್ಲ. ಈಗ ನಾಲ್ಕು ದಿನಗಳ ಬಳಿಕ ಎಫ್‌ಐಆರ್‌ ಹಾಕಲಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಸಿಟಿ ರವಿ ದೂರು ನೀಡಿದ್ದರು. ಬಿಜೆಪಿ ನಿಯೋಗ ಕೊಟ್ಟ ದೂರು ಆಧರಿಸಿ ಸೋಮವಾರ ಎಫ್​ಐಆರ್ ಆಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವೀಡಿಯೋಗೆ ಬೆಲೆಯಿಲ್ಲ: ಎನ್. ರವಿಕುಮಾರ್

ಪೊಲೀಸ್‌ ಎದುರಲ್ಲೇ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪಿಎ ವಿರುದ್ಧ ಬಿಜೆಪಿ ನಿಯೋಗ ದೂರು ಕೊಟ್ಟಿತ್ತು. ಹಾಗಿದ್ದರೂ, ಪೊಲೀಸರು ಅಪರಿಚಿತರ ಮೇಲೆ ಎಫ್‌ಐಆರ್‌ ಹಾಕಿದೆ. ಇದರ ಬೆನ್ನಲ್ಲಿಯೇ ಗೃಹ ಇಲಾಖೆ ಕಾರ್ಯದರ್ಶಿ ಮಹಾಲಕ್ಷ್ಮಿಗೆ ಬಿಜೆಪಿ ನಿಯೋಗ ದೂರು ನೂಡಿದೆ. ಅಂದು ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ PA ಸಂಗನಗೌಡ ಪಾಟೀಲ್, ಚನ್ನರಾಜ್ ಪಿಎ ಸದ್ದಾಂ ಎಲ್ಲರ ಮೇಲೂ ದೂರು ನೀಡಲಾಗಿತ್ಉತ. ಆದರೆ, ಪೊಲೀಸರು 10 ಅಪರಚಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.