Oct 2, 2021, 11:21 AM IST
ಬೆಂಗಳೂರು (ಅ. 02): ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಾಡಿಗೆ ಕಟ್ಟದೇ, ಕಂದಾಯ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ದೂರು TAPCMS ಗೆ ಸೇರಿದ ಗೋದಾಮನ್ನು 2017 ರಲ್ಲಿ ನಿಶಾ ಬಾಡಿಗೆ ಪಡೆದಿದ್ದರು. ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸನ್ನು ಶುರು ಮಾಡಿದ್ದರು. 2018 ರಿಂದ ಬಾಡಿಗೆ ಕಟ್ಟಿಲ್ಲ. ಕಂದಾಯ ಪಾವತಿಸಿಲ್ಲ. ಒಟ್ಟು 42,47 ಲಕ್ಷ ರೂ ಬಾಡಿಗೆ, 1.9 ಲಕ್ಷ ನೆಲ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈಗ TAPCMS (ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.