Jan 3, 2022, 9:52 AM IST
ಬೆಂಗಳೂರು (ಜ. 03): ಇಂದಿನಿಂದ ರಾಜ್ಯಾದ್ಯಂತ 15-18 ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ (Covaxin) ಲಸಿಕೆ ನೀಡುವ ಅಭಿಯಾನ (Vaccination) ಆರಂಭಗೊಳ್ಳಲಿದೆ. ಮೊದಲ ದಿನವೇ 4,160 ಲಸಿಕಾ ಶಿಬಿರದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
Covid 19: ಹೊಸ ಟಫ್ ರೂಲ್ಸ್ ಜಾರಿಗೆ ತರುತ್ತೇವೆ ಎಂದ ಆರ್ ಅಶೋಕ್
ರಾಜ್ಯದಲ್ಲಿ 15ರಿಂದ 18 ವರ್ಷ ವಯಸ್ಸಿನೊಳಗಿನ 31.75 ಲಕ್ಷ ಮಕ್ಕಳಿದ್ದು, ಶಾಲೆ, ಕಾಲೇಜುಗಳಲ್ಲಿಯೇ ಲಸಿಕಾಕರಣಕ್ಕೆ ಒತ್ತು ನೀಡಲಾಗಿದೆ. ಶಾಲೆಗಳಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಸಹ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮೇಲುಸ್ತುವಾರಿಯಲ್ಲಿ ಲಸಿಕೆ ನೀಡುವಂತೆ ಸರ್ಕಾರ ಸೂಚಿಸಿದೆ.