Nov 30, 2021, 2:00 PM IST
ಬೆಂಗಳೂರು(ನ.30): ಒಮಿಕ್ರಾನ್ (Omicron) ಆತಂಕ ಬೆನ್ನಲ್ಲೇ ಹೈ ಅಲರ್ಟ್ ಘೋಷಣೆಯಾಗಿದೆ. ಕೊರೋನಾ (Covid variant) ರೂಪಾಂತರಿಯಾದ ಹೊಸ ತಳಿ ಪತ್ತೆಯಾಗಿದ್ದು, ಇದರ ನಿಯಂತ್ರಣದ ಉದ್ದೇಶದಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಲಾಗುತ್ತಿದೆ. ಬೆಂಗಳೂರಿನ (Bengaluru) ಮೆಜೆಸ್ಟಿಕ್, ರೈಲ್ವೆ ನಿಲ್ದಾಣದಲ್ಲಿ (Railway station) ಟೆಸ್ಟಿಂಗ್ ಹೆಚ್ಚಳ ಮಾಡಲಾಗಿದೆ. ಹೊರ ರಾಜ್ಯಗಳಿಂದ ಬಂದವರ ತಪಾಸಣೆ ಮಾಡಲಾಗುತ್ತಿದೆ. ಕೇರಳ (Kerala) ಹಾಗೂ ಮಹಾರಾಷ್ಟ್ರದಿಂದ (Maharashtra) ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
Omicron variant : 13 ದೇಶಗಳಲ್ಲಿ ಕಾಣಿಸಿಕೊಂಡ ವೈರಸ್, ಮುನ್ನೆಚ್ಚರಿಕೆಯೇ ಪರಿಹಾರ
ಸದ್ಯ 14 ದೇಶಗಳಲ್ಲಿ ಒಮಿಕ್ರಾನ್ ಆತಂಕ ತಲೆದೋರಿದ್ದು, ಇದರಿಂದ ಎಲ್ಲೆಡೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಏರ್‌ಪೋರ್ಟ್‌ಗಳಲ್ಲಿಯೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ.