Covid 3rd Wave: ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ಆತಂಕವಿಲ್ಲ: ಸಿಎಂ ಬೊಮ್ಮಾಯಿ

Jan 22, 2022, 3:01 PM IST

ಬೆಂಗಳೂರು (ಜ. 22): 3 ನೇ ಅಲೆಯಲ್ಲಿ (3rd Wave) ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ತಜ್ಞರು, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದೇವೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಹಾಗಾಗಿ ನೈಟ್ ಕರ್ಫ್ಯೂ ಮುಂದುವರೆಸಿದ್ದೇವೆ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ.

Covid 19: 101 ವಾರ್ಡ್‌ಗಳಲ್ಲಿ 500 ಕ್ಕಿಂತ ಹೆಚ್ಚು ಕೇಸ್, ಡೇಂಜರ್ ಝೋನ್  

ಬಹುಚರ್ಚಿತ ವಾರಾಂತ್ಯದ ಕಫ್ರ್ಯೂ (Weekend Curfew) ತಕ್ಷಣದಿಂದ ಜಾರಿಗೆ ಬರುವಂತೆ ನಾಡಿನಾದ್ಯಂತ ರದ್ದುಗೊಳಿಸಲಾಗಿದೆ.  ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಹಾಲಿ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಚಿತ್ರಮಂದಿರ, ಪಬ್‌, ಬಾರ್‌, ಹೋಟೆಲ್‌ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸಾಮರ್ಥ್ಯದ ಶೇ.50ರಷ್ಟು ಮಿತಿ. ರಾರ‍ಯಲಿ, ಪ್ರತಿಭಟನೆ ನಿಷೇಧ ಸೇರಿದಂತೆ ಉಳಿದೆಲ್ಲಾ ನಿರ್ಬಂಧ ಯಥಾವತ್‌ ಮುಂದುವರಿಕೆಯಾಗಿದೆ.