ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಬೆಂಗಳೂರು (ಜ. 04): ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ (Bengaluru) 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 10 ದಿನದ ಅವಧಿಯಲ್ಲಿ ಕೊರೊನಾಗೆ 41 ಸೋಂಕಿತರು ಬಲಿಯಾಗಿದ್ದಾರೆ. ಈ 41 ಮಂದಿಯಲ್ಲಿ 25 ಮಂದಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
'3 ನೇ ಅಲೆಯಲ್ಲಿ ಮನುಷ್ಯನ ಶ್ವಾಸಕೋಶಕ್ಕೆ ಅಪಾಯ ಇಲ್ಲ. ಒಮಿಕ್ರೋನ್ ವೈರಸ್‌ನಿಂದ ಶ್ವಾಸಕೋಶಕ್ಕೆ ಹಾನಿಯಾಗಬಹುದು. ವ್ಯಾಕ್ಸಿನ್ ಪಡೆದು ಶ್ವಾಸಕೋಶಗಳನ್ನು ರಕ್ಷಿಸಿಕೊಳ್ಳಿ ಎಂದು ಕೊರೋನಾ ವಿಜ್ಞಾನಿ ಡಾ. ವಿಶಾಲ್ ರಾವ್ ಸಲಹೆ ನೀಡಿದ್ದಾರೆ.