ಪಾಲಿಕೆ (BBMP) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ (CoronaVirus) ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ (Ward) 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು (ಜ. 22): ಪಾಲಿಕೆ (BBMP) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ (CoronaVirus) ಪ್ರಮಾಣ ಮಿತಿಮೀರುತ್ತಿದ್ದು, ಈ ಪೈಕಿ 101 ವಾರ್ಡ್‌ಗಳಲ್ಲಿ (Ward) 500ಕ್ಕಿಂತ ಹೆಚ್ಚು ಕೇಸ್‌ಗಳಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಎಲ್ಲೆಡೆ ಕೋವಿಡ್ ಮಾರ್ಗಸೂಚಿಗಳು ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದಾಗಿ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿ ಬಡಾವಣೆಗಳಲ್ಲೂ ಸೋಂಕಿತರು ಜಾಸ್ತಿಯಾಗುತ್ತಲೇ ಇದ್ದಾರೆ. ಮುಖ್ಯವಾಗಿ ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ದಕ್ಷಿಣ ವಲಯಗಳ ವಾರ್ಡ್‌ಗಳಲ್ಲಿ ದಿನಕ್ಕೆ 200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಬೇಗೂರು, ಹಗದೂರು, ಬೆಳ್ಳಂದೂರು, ಅರಕೆರೆ, ದೊಡ್ಡನೆಕ್ಕುಂದಿ, ಕೊನೇನ ಅಗ್ರಹಾರ, ರಾಜರಾಜೇಶ್ವರಿ ನಗರ, ಅಟ್ಟೂರು, ವಿದ್ಯಾರಣ್ಯಪುರ, ವಸಂತಪುರ, ವರ್ತೂರು, ಜ್ಞಾನಭಾರತಿ, ಕೆಂಪೇಗೌಡ ವಾರ್ಡ್, ಹೆಮ್ಮಿಗೇಪುರ, ಶಾಂತಲಾನಗರ, ಉತ್ತರಹಳ್ಳಿ, ಕೊಟ್ಟಿಗೆಪಾಳ್ಯ, ಬಾಣಸವಾಡಿ, ಹೊಯ್ಸಳ ನಗರ, ಹೂಡಿ ಸೇರಿದಂತೆ 33 ವಾರ್ಡ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.