Feb 4, 2023, 2:58 PM IST
ರಾಯಚೂರು (ಫೆ.04): ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ದೇಶದ ಏಕೈಕ ಚಿನ್ನದ ಗಣಿಯಾಗಿದೆ. ನೂರಾರು ಅಡಿ ಆಳದಲ್ಲಿರುವ ಚಿನ್ನದ ಅದಿರು ಹೊರತೆಗೆದು ಸಂಸ್ಕರಿಸಿ ಅಪ್ಪಟ ಚಿನ್ನ ತೆಗೆಯುವ ಗಣಿಗೆ ಈಗ 76ರ ಸಂಭ್ರಮ. ಹಟ್ಟಿ ಗಣಿಯಲ್ಲಿ ಬಂಗಾರ ಸಿಗುತ್ತೆ ಅಂತ ಎಲ್ಲರಿಗೂ ಗೊತ್ತು. ಆದ್ರೆ ಹಟ್ಟಿಯಲ್ಲಿ ಮೂರು ಗಣಿಗಳು ಇರುವುದು ಕೆಲವರಿಗೆ ಮಾತ್ರ ಗೊತ್ತು. ಮೊದಲಿಗೆ ವಿಲೇಜ್ ಶಾಫ್ಟ್, ಎರಡನೇಯದು ಸೆಂಟ್ರಲ್ ಶಾಫ್ಟ್, ಮತ್ತು ಮೂರನೇಯದು ಮಲ್ಲಪ್ಪ ಶಾಫ್ಟ್ ಹೀಗೆ ಇವುಗಳನ್ನು (ಶಾಫ್ಟ್ ಎಂದರೆ ಗಣಿಗಾರಿಕೆ ನಡೆಯುವ ಸ್ಥಳ ಎಂದು ಅರ್ಥ) ಈ ಮೂರು ಸ್ಥಳಗಳಿಗೂ ಶತಮಾನದ ಇತಿಹಾಸವಿದೆ. ಸದ್ಯ ವಿಲೇಜ್ ಶಾಫ್ಟ್‌ನಲ್ಲಿ ಗಣಿಗಾರಿಕೆ ಚಟುವಟಿಕೆಗಳು ಕಡಿಮೆ.
ಮಲ್ಲಪ್ಪ ಹಾಗೂ ಸೆಂಟ್ರಲ್ ಶಾಫ್ಟ್‌ಗಳಲ್ಲಿ ಈಗ ಹೆಚ್ಚು ಚಿನ್ನ ಉತ್ಪಾದನೆಯಾಗುತ್ತಿದೆ. ರಾಜ್ಯ ಸರ್ಕಾರಿ ಒಡೆತನದ ಹಟ್ಟಿ ಗಣಿ ಈಗಾಗಲೇ 2800 ಅಡಿ ಆಳಕ್ಕೆ ತಲುಪಿದೆ. ನಿತ್ಯವು ಚಿನ್ನದ ಹಟ್ಟಿಯ ಅಳ ಮತ್ತಷ್ಟು ಹೆಚ್ಚುತ್ತಿದೆ. ಹೀಗೆ ಚಿನ್ನದ ಹಟ್ಟಿ ಗಣಿ ಅಳ ಮತ್ತು ಅಂತರ ಹೆಚ್ಚಿಸಲು ಹಟ್ಟಿ ಕಂಪನಿ ತನ್ನ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಗಣಿಗಾಆರಿಕೆಯನ್ನು ಮಾಡಲು ಪ್ಲಾನ್ ಮಾಡಿಕೊಂಡಿದೆ. ಗೋಲ್ಡ್ ಕಂಪನಿಯ ಪ್ಲಾನ್ ಪ್ರಕಾರ ರೈತರ ಜಮೀನಿಗೆ ಪರಿಹಾರ ನೀಡಿ ಜಮೀನು ನೀಡಿದ ಕುಟುಂಬಕ್ಕೆ ಉದ್ಯೋಗ ನೀಡಿ ರೈತರ ಜಮೀನಿನಲ್ಲಿ ಕಂಪನಿ ಗಣಿಗಾರಿಕೆ ಶುರು ಮಾಡಿದೆ. ಆದರೆ ಕೆಲ ಜಮೀನಿಗಳಲ್ಲಿ ಗಣಿಗಾರಿಕೆಯನ್ನು ಶುರು ಮಾಡಿಲ್ಲ. ಆದರೆ ಜಮೀನಿ ಮಾಲೀಕರಿಗೆ ಕಂಪನಿಯು ಪರಿಹಾರವನ್ನು ನೀಡಿಲ್ಲ ಅಲ್ಲದೇ ಈ ಜಮೀನುಗಳು ಕಂಪನಿಗೆ ಒಳಪಟ್ಟಿವೆ ಎಂದು ದಾಖಲೆಗಳನ್ನು ಸೃಷ್ಟಿಸಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.