ಕೊರೋನಾ ವೈರಸ್ ಲಸಿಕೆ ಬೆಳಗಾವಿ ಆಸ್ಪತ್ರೆಯಲ್ಲಿ ಪ್ರಯೋಗ..!

Jul 4, 2020, 11:59 AM IST

ಬೆಳಗಾವಿ(ಜು.04): ಕೊರೋನಾ ಹೆಮ್ಮಾರಿಯ ಅಟ್ಟಹಾಸದ ನಡುವೆ ಸಮಾಧಾನಕರವಾದ ಸುದ್ದಿಯೊಂದು ಹೊರಬಿದ್ದಿದ್ದು, ಚೀನಿ ವೈರಸ್‌ಗೆ ಮದ್ದು ಅರೆಯಲು ಭಾರತ ಯಶಸ್ವಿಯಾಗಿದೆ. ದೇಸಿ ಔಷಧ ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ICMR) ಕೋವ್ಯಾಜ್ಸಿನ್ ಎನ್ನುವ ಲಸಿಕೆಯನ್ನು ಸಿದ್ಧಪಡಿಸಿದ್ದು, ಆಗಸ್ಟ್ 15ಕ್ಕೆ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಜುಲೈ 07ರಿಂದ ವಿವಿಧ ಆಸ್ಪತ್ರೆಗಳಲ್ಲಿ ಈ ಔಷಧದ ಪ್ರಯೋಗ ನಡೆಯಲಿದೆ. ಈ ಪ್ರಯೋಗ ಯಶಸ್ವಿಯಾದರೆ, ಕೊರೋನಾಗೆ ಔಷಧ ಕಂಡು ಹಿಡಿದ ವಿಶ್ವದ ಮೊದಲ ದೇಶ ಎನ್ನುವ ಗೌರವಕ್ಕೆ ಭಾರತ ಪಾತ್ರವಾಗಲಿದೆ.

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!

ಈ ಲಸಿಕೆ ಪ್ರಯೋಗಕ್ಕೆ ಬೆಳಗಾವಿಯ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೀವನ್ ರೇಖಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯಲಿದೆ. ದೇಶಾದ್ಯಂತ ಒಟ್ಟು 13 ಆಸ್ಪತ್ರೆಗಳಲ್ಲಿ ಈ ಟ್ರಯಲ್ ನಡೆಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.