Jan 12, 2021, 11:36 AM IST
ಬೆಂಗಳೂರು(ಜ.12): ಅಂತೂ ಇಂತೂ ಕೊರೋನಾ ಮಹಾಮಾಋಇಗೆ ಕಡಿವಾಣ ಹಾಕಲು ಲಸಿಕೆ ಸದ್ಯ ಬಂದಿದೆ. ಪುಣೆಯಿಂದ ಕಂಟೈನರ್‌ನಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಸೇರಿ ದೇಶದ ಒಟ್ಟು 13 ನಗರಗಳಿಗೆ ಕೊರೋನಾಗೆ ಸಂಜೀವಿನಿ ರವಾನೆ ಆರಂಭವಾಗಿದೆ.
ಎಂಟು ವಿಮಾನಗಳಲ್ಲು ದೇಶದ 13 ಸಿಟಿಗಳಿಗೆ ಪುಣೆ ವಿಮಾನ ನಿಲ್ದಾಣದಿಂದ ವ್ಯಾಕ್ಸಿನ್ ರವಾನೆ ಆರಂಭವಾಗಿದೆ. ರಾಜ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಬೆಳಗಾವಿಗೆ ಈ ಲಸಿಕೆ ಬರಲಿದೆ.
ಬೆಂಗಳೂರಿಗೆ 1,13,400 ಹಾಗೂ ಬೆಳಗಾವಿಗೆ 25,800 ವ್ಯಾಕ್ಸಿನ್ ಬಾಟಲ್‌ಗಳು ಬರಲಿವೆ. ಇನ್ನು ಒಂದುಉ ಬಾಟಲ್‌ನಲ್ಲಿ ಒಟ್ಟು ಹತ್ತು ಜನರಿಗೆ ನೀಡುವಷ್ಟು ಲಸಿಕೆ ಇದೆ.