ಗಡಿಯಲ್ಲಿಲ್ಲ ನಿಗಾ, ಜನಕ್ಕಿಲ್ಲ ಭಯ; ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಕೊರೊನಾ ಕಳ್ಳಾಟ!

Mar 20, 2021, 3:53 PM IST

ಬೆಂಗಳೂರು (ಮಾ. 20): ತಹಬದಿಗೆ ಬಂದಿದ್ದ ಕೊರೊನಾ ಸೋಂಕು ಈಗ ಮತ್ತೆ ಉಲ್ಬಣವಾಗಿದೆ. 2 ನೇ ಅಲೆ ಭಯ ಶುರುವಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ 50 % ಲಾಕ್‌ಡೌನ್ ಘೋಷಣೆಯಾಗಿದೆ. ರಾಜ್ಯದಲ್ಲಿ ಬೇಕಾಬಿಟ್ಟಿ ವರ್ತಿಸಿದರೆ ಇಲ್ಲಿಯೂ ಕೊರೊನಾ ಸೋಂಕು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ.  

ಕೊರೊನಾ ಸ್ಫೋಟ, ಮಹಾ 50 % ಲಾಕ್‌ಡೌನ್, ಕರ್ನಾಟಕದಲ್ಲೂ ಜಾರಿಯಾಗುತ್ತಾ..??

ಕೇವಲ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿ, ಮಾಶಾಳ ಅಂತರಾಜ್ಯ ಗಡಿ, ಅರ್ಜುಣಗಿ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮಾತ್ರ ಚೆಕ್‌ಪೊಸ್ಟ್‌ ತೆರೆಯಲಾಗಿದ್ದು ಉಳಿದಂತೆ ಅಕ್ಕಲಕೋಟ ಹೊಸೂರ, ಕರ್ಜಗಿ ಹೈದ್ರಾ, ದುಧನಿ ಜೇವರ್ಗಿ(ಬಿ), ಬಬಲಾದ ಮಾಶಾಳ, ಸಿನ್ನೂರ ಬಡದಾಳ, ದುಧನಿ ಬಡದಾಳ, ದುಧನಿ ಅರ್ಜುಣಗಿ ಗ್ರಾಮಗಳ ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ ಯಾವ ಚೆಕ್‌ಪೊಸ್ಟ್‌ ಇಲ್ಲ, ಯಾವ ನೀಗಾ ವ್ಯವಸ್ಥೆಯೂ ಇಲ್ಲ. ಹೀಗಾಗಿ ಚೆಕ್‌ಪೊಸ್ಟ್‌ ಇರುವ ಕಡೆಯಿಂದ ಬಿಟ್ಟು ಇಲ್ಲದ ಕಡೆಯಿಂದ ಮಹಾರಾಷ್ಟ್ರದವರು ರಾಜ್ಯದ ಗಡಿ ಪ್ರವೇಶಿಸುತ್ತಿದ್ದಾರೆ. ಇನ್ನು ಯಾವ ಜಿಲ್ಲೆಗಳಲ್ಲಿ ಹೇಗಿದೆ ಸ್ಥಿತಿ..? ನೋಡಿ