Aug 2, 2020, 9:44 AM IST
ಬೆಂಗಳೂರು(ಆ.02): ನಮ್ಮ ರಾಜ್ಯದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೊರೋನಾ ಪತ್ತೆ ಹಚ್ಚುವ ಭಾಗವಾಗಿ ಟೆಸ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ನಡೆದ ಸಮೀಕ್ಷೆಯೊಂದರಲ್ಲಿ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಸದ್ಯಕ್ಕಂತೂ ಕೊರೋನಾ ಅಟ್ಟಹಾಸ ಮುಗಿಯುವುದಿಲ್ಲ ಎನ್ನುವುದು ಹೊಸದಾಗಿ ನಡೆಸಿದ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ರಾಜ್ಯದಲ್ಲಿ ಮುಂದಿನ ನೂರು ದಿವಸಗಳ ಕಾಲ ವೈರಸ್ ಅಟ್ಟಹಾಸ ಮುಂದುವರೆಯಲಿದೆ ಎನ್ನುವ ಆತಂಕಕಾರಿ ಹೊರಬಿದ್ದಿದೆ.
ಕೊರೋನಾ ಚಿಕಿತ್ಸೆಗೆ 7 ಲಕ್ಷ ಬಿಲ್: ಕಂಗಾಲಾದ ರೋಗಿ..!
ರಾಷ್ಟ್ರೀಯ ಸುದ್ದಿವಾಹಿನಿ ಹಾಗೂ ಪ್ರೊಟಿವಿಟಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಯಲಾಗಿದೆ. ಅಂದರೆ ಇನ್ನೂ ಮೂರು ತಿಂಗಳುಗಳ ಕಾಲ ವೈರಸ್ ಅಟ್ಟಹಾಸ ಹೀಗೆಯೇ ಮುಂದುವರೆಯಲಿದೆ. ಇನ್ನೂ ಆತಂಕಕಾರಿ ವಿಚಾರವೇನೆಂದರೆ ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಗರಿಷ್ಠ ಮಟ್ಟಕ್ಕೆ ಏರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.