ಹಿಜಾಬ್ (Hijab) ನನ್ನ ಹಕ್ಕು, ಆದರೆ ಶಾಲೆ, ಕಾಲೇಜಿನ ಒಳಗೆ ಬೇಡ. ಹಿಜಾಬ್ ಬೇಕು ಎನ್ನುವವರು ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಹೋಗಿ. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆ ಸರಿಯಲ್ಲ: ಮುಸ್ಲಿಂ ನಾಯಕಿ ಅಂಜುಂ ಸುರಯ್ಯ
ಬೆಂಗಳೂರು (ಫೆ. 08): ಹಿಜಾಬ್ (Hijab) ನನ್ನ ಹಕ್ಕು, ಆದರೆ ಶಾಲೆ, ಕಾಲೇಜಿನ ಒಳಗೆ ಬೇಡ. ಹಿಜಾಬ್ ಬೇಕು ಎನ್ನುವವರು ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಹೋಗಿ. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆ ಸರಿಯಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಬೇಡಿ ಎನ್ನುವ ಮೂಲಕ ಹಿಜಾಬ್‌ಗೆ ಮುಸ್ಲಿಂ ನಾಯಕಿ ಅಂಜುಂ ಸುರಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.