ಕೊರೋನಾ ಹರಡುವಿಕೆ (CoronaVirus) ನಿಯಂತ್ರಿಸಲು ರಾಜ್ಯ ಸರ್ಕಾರ ಮದುವೆ ಸಮಾರಂಭಗಳಿಗೆ ಜನಮಿತಿ ಹೇರಿರುವುದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಮದುವೆಗಳಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರು (ಜ. 10): ಕೊರೋನಾ ಹರಡುವಿಕೆ (CoronaVirus) ನಿಯಂತ್ರಿಸಲು ರಾಜ್ಯ ಸರ್ಕಾರ ಮದುವೆ ಸಮಾರಂಭಗಳಿಗೆ ಜನಮಿತಿ ಹೇರಿರುವುದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಮದುವೆಗಳಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಹಲವು ಕುಟುಂಬಗಳು ಮದುವೆ ದಿನಾಂಕ ಬದಲಾವಣೆ ಮಾಡಿವೆ. ಇನ್ನೂ ಹಲವು ಕುಟುಂಬಗಳು ಮದುವೆಗೆಂದು ಕಾದಿರಿಸಿದ್ದ ಸಭಾಂಗಣ, ಕಲ್ಯಾಣ ಮಂಟಪಗಳ ಬುಕಿಂಗ್ ಅನ್ನು ರದ್ದು ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪ, ಮ್ಯಾರೇಜ್ ಹಾಲ್‌ಗಳ ಮಾಲೀಕರು ಕಂಗಾಲಾಗಿದ್ದಾರೆ.
ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200, ಸಭಾಂಗಣಗಳಲ್ಲಿ 100 ಮಂದಿಯ ಮಿತಿ ಹೇರಿದೆ. ಈ ಹಿನ್ನೆಲೆ ಸಾವಿರಾರು ಜನರನ್ನು ಕರೆದು ಅದ್ಧೂರಿ ಮದುವೆ ಮಾಡಿಕೊಳ್ಳಬೇಕು ಎನ್ನುವವರಿಗೆ ನಿರಾಸೆಯಾಗಿ ಹಲವರು ದಿನಾಂಕ ಬದಲಾವಣೆ, ರದ್ದು ಮಾಡಲು ಮುಂದಾಗಿದ್ದಾರೆ.