ಹಲೋ ಮಿನಿಸ್ಟರ್ ಕಾರ್ಯಕ್ರಮದ ಮೂರನೇ ಆವೃತ್ತಿಗೆ ಚಾಲನೆ ನೀಡಿದ ಬಳಿಕ ಸಿಎಂ ಬೊಮ್ಮಾಯಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿದರು
ಬೆಂಗಳೂರು (ಸೆ. 13): ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲೋ ಮಿನಿಸ್ಟರ್ ಸೀಸನ್ 3 ಕಾರ್ಯಕ್ರಮದ ಉದ್ಘಾಟನೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋಗೆ ಆಗಮಿಸಿದ್ದರು. ಅವರಿಗಾಗಿ ವಿಶೇಷ ದೊಡ್ಡ ಚೇರನ್ನು ಹಾಕಲಾಗಿತ್ತು. ಅದರಲ್ಲಿ ಕೂರಲು ಒಪ್ಪದೇ ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತು ಸರಳತೆ ಮೆರೆದರು. ಬಾಲ್ಯದ ಸ್ನೇಹಿತರ ಒಡನಾಟದ ಮೆಲುಕು, ಮನದಾಳದ ಮಾತುಗಳು, 1ನೇ ತರಗತಿಯ 40 ಸಹಪಾಠಿಗಳನ್ನು ಗುರುತು...ತಮ್ಮ ಅಚ್ಚುಮೆಚ್ಚು ಹಿಂದಿಯ ಹಾಡಿಗೆ ದನಿ ಗೂಡಿಸಿದ ಮುಖ್ಯಮಂತ್ರಿ ಇದಕ್ಕೆಲ್ಲಾ ವೇದಿಕೆಯಾಗಿದ್ದು ಕನ್ನಡ ಪ್ರಭ ಪತ್ರಿಕೆಯ ಸಹೋದರ ಸಂಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್‌ನ ಹಲೋ ಸಿಎಂ ಕಾರ್ಯಕ್ರಮ.
ಹಲೋ ಮಿನಿಸ್ಟರ್ ಕಾರ್ಯಕ್ರಮದ ಮೂರನೇ ಆವೃತ್ತಿಗೆ ಚಾಲನೆ ನೀಡಿದ ಬಳಿಕ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿದರು. ಹುಬ್ಬಳ್ಳಿಯ ರೋಟರಿ ಇಂಗ್ಲೀಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಘಟನೆಗಳನ್ನು ನೆನಪಿಸಿಕೊಂಡರು. ಬಾಲ್ಯದ ಅನೇಕ ಸ್ನೇಹಿತರು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.