ಸರ್ಕಾರಿ ಸೌಲಭ್ಯಕ್ಕೆ ನಕಲಿ ಪ್ರಮಾಣ ಪತ್ರವನ್ನು ನೀಡುವುದನ್ನು ನೋಡಿದ್ದೇವೆ. ಸೌಲಭ್ಯವನ್ನು ಬಳಸಿಕೊಳ್ಳುವುದನ್ನೂ ನೋಡಿದ್ದೇವೆ. ಚಿತ್ರದುರ್ಗ ಗ್ರಾಪಂ ಸದಸ್ಯೆಯೊಬ್ಬರು ಸರಕಾರಿ ಸೌಲಭ್ಯಕ್ಕಾಗಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ಧಾರೆ.
ಬೆಂಗಳೂರು (ಏ. 14): ಸರ್ಕಾರಿ ಸೌಲಭ್ಯಕ್ಕೆ ನಕಲಿ ಪ್ರಮಾಣ ಪತ್ರವನ್ನು ನೀಡುವುದನ್ನು ನೋಡಿದ್ದೇವೆ. ಸೌಲಭ್ಯವನ್ನು ಬಳಸಿಕೊಳ್ಳುವುದನ್ನೂ ನೋಡಿದ್ದೇವೆ. ಚಿತ್ರದುರ್ಗ ಗ್ರಾಪಂ ಸದಸ್ಯೆಯೊಬ್ಬರು ಸರಕಾರಿ ಸೌಲಭ್ಯಕ್ಕಾಗಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ಧಾರೆ.
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ವಿವಿ ಪುರ ಗ್ರಾಪಂ ಚುನಾವಣೆಯಲ್ಲಿ ನೀಲಮ್ಮ ಎಂಬ ಮಹಿಳೆ ಎಸ್‌ಟಿ ಮೀಸಲಾತಿ ಕ್ಷೇತ್ರವಾದ ವಿವಿ ಪುರದಿಂದ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. ಆದರೆ ನೀಲಮ್ಮ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ಧಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ನೀಲಮ್ಮ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ಧಾರೆ.