ಹಾವೇರಿ ( Haveri)ಗುತ್ತಲಕ್ಕೆ ಸಮೀಪದ ಬಸಾಪುರ ಗ್ರಾಮದ ಹೊರವಲಯದಲ್ಲಿ ರಾಜ್ಯ ಮಟ್ಟದ ಹೋರಿ (bull) ಹಬ್ಬ ವೀಕ್ಷಣೆ ವೇಳೆ ಹೋರಿಗಳು ತಿವಿದು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, 5 ಜನರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ
ಹಾವೇರಿ (ಡಿ. 01): ಗುತ್ತಲಕ್ಕೆ ಸಮೀಪದ ಬಸಾಪುರ ಗ್ರಾಮದ ಹೊರವಲಯದಲ್ಲಿ ರಾಜ್ಯ ಮಟ್ಟದ ಹೋರಿ (bull) ಹಬ್ಬ ವೀಕ್ಷಣೆ ವೇಳೆ ಹೋರಿಗಳು ತಿವಿದು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, 5 ಜನರಿಗೆ ಗಂಭೀರ ಗಾಯಗಳಾಗಿದ್ದು, (Injured) ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲಿ ಒಬ್ಬನನ್ನು ಬರಡಿ ಗ್ರಾಮದ ವೃದ್ಧ ಮೈಲಾರೆಪ್ಪ ಗಾಜಿ ಎಂದು ತಿಳಿದು ಬಂದಿದೆ. ಗಾಯಗೊಂಡವರು ಗುತ್ತಲದ ಸಮುದಾಯ ಆರೋಗ್ಯ ಕೇಂದ್ರ, ಹಾವೇರಿ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೋರಿ ಹಬ್ಬ ವೀಕ್ಷಣೆ ಮಾಡಲು ತಮಿಳುನಾಡು,(Tamilnadu) ಆಂಧ್ರ ಪ್ರದೇಶ (Andhra Pradesh) ಹಾಗೂ ರಾಜ್ಯದ ನಾನಾ ಭಾಗಗಳಿಂದ 2 ಲಕ್ಷಕ್ಕೂ ಅಧಿಕ ಜನ ಸೇರಿದ್ದು, ನಿರೀಕ್ಷೆಗೂ ಮೀರಿ ಬಂದ ಹೋರಿ ಅಭಿಮಾನಿಗಳು ಹತೋಟಿಗೆ ಬಾರದ ಹಿನ್ನಲೆಯಲ್ಲಿ ಹೋರಿ ಹಬ್ಬವನ್ನು ಬಂದ್ ಮಾಡಿದರು.