Jan 4, 2025, 11:27 PM IST
ಬೆಂಗಳೂರು (ಜ.4): ಖರ್ಗೆ ಕೋಟೆ ಕಲಬುರಗಿಯಲ್ಲಿ ಬಿಜೆಪಿ ರಣಕಹಳೆ ಊದಿದೆ. ಪ್ರಿಯಾಂಕ್ ಖರ್ಗೆ ರಾಜೀನಾಮೆಗಾಗಿ ಮುತ್ತಿಗೆ ಹೈಡ್ರಾಮಾ ನಡೆದಿದೆ. ಕೇಸರಿಪಡೆ ಪ್ರತಿಭಟನಾ ಅಸ್ತ್ರಕ್ಕೆ ಕಾಂಗ್ರೆಸ್ ಗಾಂಧಿಗಿರಿ ತಿರುಗೇಟು ನೀಡಿದೆ.
ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ. ಸಚಿವ ಪ್ರಿಯಾಂಕ್ ಆಪ್ತನ ಹೆಸರು ಉಲ್ಲೇಖ ಮಾಡಿರೋ ಕಾರಣ ಬಿಜೆಪಿ ಖರ್ಗೆ ರಾಜೀನಾಮೆ ಪಟ್ಟು ಹಿಡಿದಿದೆ. ಆತ್ಮಹತ್ಯೆ ನಡೆದ ದಿನದಿಂದಲೂ ಈ ಕೇಸ್‌ಅನ್ನು ಸಿಬಿಐಗೆ ಕೊಡಿ ಎಂದು ಬಿಜೆಪಿ ಒತ್ತಾಯಿಸುತ್ತಲೇ ಇತ್ತು. ಜನವರಿ 4ರೊಳಗೆ ಸಿಬಿಐಗೆ ಕೊಡದಿದ್ರೆ ಪ್ರಿಯಾಂಕ್ ಮನೆಗೆ ಮುತ್ತಿಗೆ ಹಾಕೋದಾಗಿ ಘೋಷಿಸಿತ್ತು. ಅದರಂತೆ ಇವತ್ತು ಕೇಸರಿ ಪಡೆ ಪ್ರಿಯಾಂಕ್ ಕೋಟೆಗೆ ದಂಡೆತ್ತಿ ಹೋಗಿತ್ತು.
ಸಚಿನ್ ಪಾಂಚಾಳ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ: ತನಿಖೆಗೆ ಮೊದಲೇ ಕ್ಲೀನ್ ಚಿಟ್ ಕೊಟ್ಟ ಸಚಿವ ಬೋಸರಾಜು!
ಕಲಬುರಗಿ ಐವಾನ್ ಎ ಶಾಹಿ ರಸ್ತೆಯಲ್ಲಿರುವ ಸಚಿವ ಖರ್ಗೆ ನಿವಾಸಕ್ಕೆ ಇಂದು ಖಾಕಿ ಭದ್ರಕೋಟೆಯಲ್ಲಿತ್ತು. ಖರ್ಗೆ ಬೆಂಬಲಿಗರು, ಮನೆ ಎದುರು ಬಿಜೆಪಿ ಗೂಂಡಾಗಿರಿ ವಿರುದ್ಧ ಕಾಂಗ್ರೆಸ್ ಗಾಂಧಿಗಿರಿ ಪೋಸ್ಟರ್ ಹಾಕಿ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಮುತ್ತಿಗೆ ಹಾಕಲು ಬಂದ್ರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡ್ತೀವಿ, ಜೊತೆಗೆ ಎಳನೀರು, ಟೀ, ಕಾಫಿ, ತಂಪು ಪಾನೀಯ ವ್ಯವಸ್ಥೆ ಮಾಡಿದ್ದೇವೆ ಅಂತ ತಿರುಗೇಟು ಕೊಟ್ಟಿದ್ದರು.