ವಿಧಾನಸಭೆಯಲ್ಲಿಂದು ಕವರ್ ಸ್ಟೋರಿ ವರದಿ ಪ್ರಸ್ತಾಪವಾಗಿದೆ. ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ವಿಷಯ ಪ್ರಸ್ತಾಪಿಸಿದರು.
ಬೆಂಗಳೂರು (ಸೆ. 21): ವಿಧಾನಸಭೆಯಲ್ಲಿಂದು ಕವರ್ ಸ್ಟೋರಿ ವರದಿ ಪ್ರಸ್ತಾಪವಾಗಿದೆ. ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ವಿಷಯ ಪ್ರಸ್ತಾಪಿಸಿದರು.
'ನನ್ನ ತಾಯಿಯನ್ನು ಮತಾಂತರ ಮಾಡಿದ್ದಾರೆ. ಹೊಸದುರ್ಗದಲ್ಲಿ 18-20 ಸಾವಿರ ಜನರ ಮತಾಂತರ ಆಗಿದೆ. ಕ್ರಿಶ್ಚಿಯನ್ ಮಿಷನರಿಗಳು, ಜನರನ್ನು ಬ್ರೇನ್ ವಾಶ್ ಮಾಡುತ್ತಿವೆ. ನನ್ನ ತಾಯಿಯ ಮೊಬೈಲ್ ರಿಂಗ್‌ಟೋನ್ ಕ್ರಿಶ್ಚಿಯನ್ ಹಾಡು, ಮನೆಯಲ್ಲಿ ಪೂಜೆ ಮಾಡುವಂತಿಲ್ಲ, ಕುಂಕುಮ ಇಡಬಾರದು ಅಂತಾರೆ. ಇದರಿಂದ ನಮಗೆ ಬಹಳ ಮುಜುಗರವಾಗುತ್ತದೆ' ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.