ರಾಜ್ಯ ರಾಜಕೀಯದಲ್ಲಿ Bitcoin  ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

ರಾಜ್ಯ ರಾಜಕೀಯದಲ್ಲಿ Bitcoin ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

Published : Nov 11, 2021, 10:14 AM ISTUpdated : Nov 11, 2021, 10:17 AM IST

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಹಗರಣ ರಾಜಕಾರಣಗಳಲ್ಲಿ ನಡುಕ ಸೃಷ್ಟಿಸಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಅಂತಾರಾ‍ಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ಯಾರಿಗೆಲ್ಲ ಸಂಪರ್ಕವಿತ್ತೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 

ಬೆಂಗಳೂರು(ನ.11): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಹಗರಣ ರಾಜಕಾರಣಗಳಲ್ಲಿ ನಡುಕ ಸೃಷ್ಟಿಸಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಅಂತಾರಾ‍ಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ಯಾರಿಗೆಲ್ಲ ಸಂಪರ್ಕವಿತ್ತೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 

ಹೌದು ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಹಾಗೂ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಜತೆ ಆಪ್ತ ಸ್ನೇಹವಿತ್ತು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಆರೋಪಪಟ್ಟಿಗಳಲ್ಲಿ ಈ ಅಂಶ ಉಲ್ಲೇಖವಾಗಿದೆ.

ಹ್ಯಾರಿಸ್‌ ಪುತ್ರ ಉಮರ್‌ ನಲಪಾಡ್‌ ಹಾಗೂ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಜತೆ ಆತ್ಮೀಯ ಒಡನಾಟ ಹೊಂದಿದ್ದ ಶ್ರೀಕಿ, ಈ ನಾಯಕರ ಮಕ್ಕಳ ಜತೆ ಹಣಕಾಸು ವ್ಯವಹಾರ ಸಹ ಹೊಂದಿದ್ದ. ಅಲ್ಲದೆ, 2018ರಲ್ಲಿ ಉಮರ್‌ನ ಸೋದರ ಮೊಹಮ್ಮದ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಯುಬಿ ಸಿಟಿ ಪಬ್‌ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಆರೋಪಿಯಾಗಿದ್ದ. ಹಾಗೆಯೇ 2020ರಲ್ಲಿ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಬಂಧಿತನಾಗಿದ್ದ ಡ್ರಗ್ಸ್‌ ಕೇಸ್‌ನಲ್ಲಿ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಗಳಲ್ಲಿ ಕೂಡ ಉಲ್ಲೇಖವಾಗಿದೆ. ಈ ಮೂಲಕ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಾಗ್ದಾಳಿ ಮತ್ತೊಂದು ಮಜಲು ಪಡೆಯುವ ಸಾಧ್ಯತೆಗಳಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more