BIG 3: ನೀರಿಲ್ಲದೇ, ಮೇವಿಲ್ಲದೇ ನರಳಾಡುತ್ತಿದ್ದ ಟಾಂಗಾ ಕುದುರೆಗಳ ನೆರವಿಗೆ ಧಾವಿಸಿದ ಅಧಿಕಾರಿಗಳು!

Mar 23, 2023, 1:46 PM IST

ವಿಜಯಪುರ (ಮಾ.23): ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3 ಕೇವಲ ಜನರ ಪರವಾಗಿ ಮಾತ್ರ ಸುದ್ದಿ ಪ್ರಸಾರ ಮಾಡಿ ಪ್ರಾಬ್ಲಂ ಕ್ಲೀಯರ್ ಮಾಡಲ್ಲ. ಮೂಕ ಪ್ರಾಣಿಗಳ ಸಮಸ್ಯೆ ಬಗ್ಗೆ ತೋರಿಸಿ ಅವುಗಳ ಪರವು ನಿಲ್ಲುತ್ತೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಕುದುರೆಗಳ ಮೇವು, ನೀರಿನ ಸಮಸ್ಯೆಗೆ ಕೊನೆಗೂ ಸಿಕ್ಕಿದೆ ಮುಕ್ತಿ. ವಿಶ್ವ ವಿಖ್ಯಾತ ವಂಡರ್‌ ಗೋಳಗುಮ್ಮಟ ಇರುವ ವಿಜಯಪುರವನ್ನ ವಂಡರ್‌ ಪುಲ್‌ ಆಗಿ  ಕಾಣುವಂತೆ ಮಾಡಿದ್ದು, ಜಟಕಾ ಬಂಡಿಯ ಕುದುರೆಗಳು. ಆದ್ರೆ, ಅವುಗಳು ಅನುಭವಿಸುತ್ತಿದ್ದ ನರಕ ಯಾತನೆ ಅಷ್ಟಿಷ್ಟಲ್ಲ. ಸರಿಯಾಗಿ ತಿನ್ನೋಕೆ ಮೇವಿಲ್ಲ, ಕನಿಷ್ಟ ಪಕ್ಷ  ಕುಡಿಯೋ ನೀರು ಸಹ ಸಿಗ್ತಿರಲಿಲ್ಲ.

ಅನಾರೋಗ್ಯ ಪೀಡಿತವಾದ ಕುದುರೆಗಳು ಇಂಥಹ ನರಕಯಾತನೆಯ ನಡುವೆಯು ಪ್ರವಾಸಿಗರ ನ್ನ ಹೊತ್ತು ಅಡ್ಡಾಡುತ್ತಿದ್ವು. ಟಾಂಗಾ ಕುದುರೆಗಳು ಅನುಭವಿಸುತ್ತಿದ್ದ ಸಂಕಷ್ಟದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನ ಬಿಗ್‌ ೩ಯಲ್ಲಿ ವಿಸ್ತೃತವಾದ ವರದಿ ಪ್ರಸಾರ ಮಾಡಿದ್ವಿ. ಬಿಗ್3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಪ್ರವಾಸೋದ್ಯಮ ಇಲಾಖೆ ಸಹ ನಿರ್ದೇಶಕ ಮಲ್ಲಿಕಾರ್ಜುನ್‌ ಭಜಂತ್ರಿ ಸ್ಥಳಕ್ಕಾಗಮಿಸಿ ಟಾಂಗಾವಾಲಗಳಿಂದ ಸಮಸ್ಯೆ ಆಲಿಸಿದರು. ತಕ್ಷಣವೇ ಇಲಾಖೆಯೂ  ಕುದುರೆಗಳಿಗೆ ನೀರು, ಮೇವು, ನೆರಳಿನ ವ್ಯವಸ್ಥೆಯಾಗಬೇಕು ಮಹಾನಗರ ಪಾಲಿಕೆ ಕಮಿಷನರ್ಗೆ ಪತ್ರವನ್ನು ಬರೆದಿದ್ದಾರೆ. 

ಇನ್ನು, ಈ ವರದಿ ನೋಡಿದ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ನಮ್ಮ ವಿಜಯಪುರ ಪ್ರತಿನಿಧಿ ಷಡಕ್ಷರಿಗೆ ಕರೆ ಮಾಡಿ ಕುದುರೆಗಳಿಗೆ ಬೇಸಿಗೆ ಮುಗಿಯುವವರೆಗು ಮೇವಿನ ವ್ಯವಸ್ಥೆ, ಕುಡಿಯುವ ನೀರಿಗೆ ಸಿಮೆಂಟ್‌ ಟಬ್‌ ಗಳ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡುವ ಮಾತುಕೊಟ್ಟರು. ಕೊಟ್ಟ ಮಾತಿನಂತೆ ಒಂದೆ ಗಂಟೆಯಲ್ಲಿ ಒಂದು ವಾಹನ ತುಂಬಿ ಹಸಿರು ಮೇವು, ಎರಡು ನೀರಿನ ಸಿಮೆಂಟ್‌ ತೊಟ್ಟಿಗಳು ಸ್ಥಳಕ್ಕೆ ಬಂದವು. ಹಸಿರು ಮೇವು, ನೀರಿನ ತೊಟ್ಟಿಗಳ ಕಂಡ ಟಾಂಗಾವಾಲಾಗಳು ಖುಷ್‌ ಆದ್ರು. ಆನ್‌ ದಿ ಸ್ಪಾಟ್‌ ಸಹಾಯ ಮಾಡಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗೆ ಧನ್ಯವಾದ ಹೇಳಿದ್ರು. 

ಬಿಗ್‌3 ವರದಿಯ ಇಂಪ್ಯಾಕ್ಟ್‌ ಇಲ್ಲಿಗೆ ನಿಂತಿಲ್ಲ. ಕುದುರೆಗಳ ಅನುಭವಿಸುತ್ತಿರುವ ಸಂಕಷ್ಟದ ವರದಿಯನ್ನ ನೋಡಿದ ವಿಜಯಪುರದ ಪ್ರಾಣಿದಯಾ (ಸಂಘ) ಮಂಡಳಿಯ ಸದಸ್ಯೆ ರಶ್ಮೀ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಹೊಳೆಪ್ಪಗೋಳ ಹಾಗೂ ಜಿಲ್ಲಾ ಪಶು ವೈದ್ಯ ಶರಣಗೌಡ ಬಿ ಎಂ ಸೇರಿ ಪಶು ಆಸ್ಪತ್ರೆಯ ಐವರು ಸಿಬ್ಬಂದಿಗಳು ಗಾಯಗೊಂಡ ಕುದುರೆಗಳಿಗೆ ಚಿಕಿತ್ಸೆ ನೀಡಿದ್ರು. ಅಲ್ಲದೆ ಕುದುರೆಗಳಿಗೆ ಅವಶ್ಯವಿರುವ ಜಂತು ಹುಳು ಔಷಧಿಯನ್ನ ಆನ್‌ ದಿ ಸ್ಪಾಟ್‌ ಕುದುರೆಗಳಿಗೆ ನೀಡಿದ್ರು. ಅಲ್ಲದೆ ಕುದುರೆ ಮಾಲಿಕರಿಗೆ ವಿಟಮಿನ್‌ ಮಾತ್ರೆ, ಔಷಧಿಗಳನ್ನ ವಿತರಿಸಿದ್ರು. ಈ ವೇಳೆ ಪಶು ಸಂಗೋಪನಾ ಜಿಲ್ಲಾ ಉಪ ನಿರ್ದೇಶಕ ಡಾ. ಹೊಳೆಪ್ಪಗೋಳ ಬಿಗ್‌3 ತಂಡದ ಕಾರ್ಯವನ್ನ ಶ್ಲಾಘಿಸಿದ್ರು. 

ಅಲ್ಲದೆ ಮೂರು ತಿಂಗಳಿಗೊಮ್ಮೆ ಕುದುರೆಗಳ ಆರೋಗ್ಯ ತಪಾಸಣೆ, ಸಹಾಯವನ್ನ ನೀಡುವ ಭರವಸೆ ವ್ಯಕ್ತ ಪಡೆಸಿದ್ರು.. ಪ್ರಾಣಿ ದಯಾ ಸಂಘದ ಸದಸ್ಯೆ ರಶ್ಮೀ ಮಾತನಾಡಿದ ಕುದುರೆಗಳ ಆರೋಗ್ಯದ ಬಗ್ಗೆ ನಿಗಾ ಇಡುವುದಾಗಿ ಹೇಳಿದ್ರು. ಒಟ್ಟಿನಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌3 ಪ್ರಸಾರವಾದ ಒಂದೆ ಒಂದು ವರದಿ ಅಶ್ವಗಳಿಗೆ ಕೊಂಚ ನೆಮ್ಮದಿಯನ್ನ ತಂದಿದೆ. ಮೇವು-ನೀರಿನ ಜೊತೆಗೆ ಔಷಧಿ ಲಭ್ಯವಾದ್ದು ಟಾಂಗಾ ಮಾಲಿಕರಲ್ಲು ಸಂತಸ ತಂದಿದೆ. ನೀರು ಹಾಗೂ ಮೇವು ನಿರಂತರ ಲಭ್ಯತೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸಹ ನಿರ್ದೇಶಕ ಮಲ್ಲಿಕಾರ್ಜುನ್‌ ಪಾಲಿಕೆ ಕಮೀಷನರ್‌ಗೆ ಪತ್ರ ಬರೆದಿದ್ದು, ಯಾವ ರೀತಿಯ ಸ್ಪಂದನೆ ಸಿಗಲಿದೆ ಕಾದು ನೋಡಬೇಕಿದೆ.