ಬಿಗ್ 3 ಯಲ್ಲಿ ಸಮಸ್ಯೆ ಪ್ರಸಾರವಾಯ್ತು ಅಂದ್ರೆ, ಇಂಪ್ಯಾಕ್ಟ್ ಆಗಿಯೇ ಆಗುತ್ತದೆ ಎಂದರ್ಥ. ಚಿತ್ರದುರ್ಗದ ಮಲ್ಲಾಪುರ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಕೆರೆಯೊಂದು ಕೋಡಿ ಬಿದ್ದಿದೆ. ಮಳೆ ಬಂದರೆ ಸಾಕು ಕೊಳಚೆ ನೀರು ಮನೆಯೊಳಗೆ ನುಗ್ಗುತ್ತದೆ. ಜನರು ಕೊಳಚೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಚಿತ್ರದುರ್ಗ (ಜ. 21): ಬಿಗ್ 3 ಯಲ್ಲಿ ಸಮಸ್ಯೆ ಪ್ರಸಾರವಾಯ್ತು ಅಂದ್ರೆ, ಇಂಪ್ಯಾಕ್ಟ್ ಆಗಿಯೇ ಆಗುತ್ತದೆ ಎಂದರ್ಥ. ಚಿತ್ರದುರ್ಗದ ಮಲ್ಲಾಪುರ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಕೆರೆಯೊಂದು ಕೋಡಿ ಬಿದ್ದಿದೆ. ಮಳೆ ಬಂದರೆ ಸಾಕು ಕೊಳಚೆ ನೀರು ಮನೆಯೊಳಗೆ ನುಗ್ಗುತ್ತದೆ. ಜನರು ಕೊಳಚೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವೊಬ್ಬ ಜನಪ್ರತಿನಿಧಿಯೂ, ಅಧಿಕಾರಿಯಾಗಲಿ ಈ ಕಡೆ ತಲೆ ಹಾಕಿಲ್ಲ. ಜನರ ಸಮಸ್ಯೆ ಆಲಿಸಿಲ್ಲ. ಜನರ ಗೋಳನ್ನು ಬಿಗ್3 ಯಲ್ಲಿ ಪ್ರಸಾರ ಮಾಡಿ, ಸಂಬಂಧಫಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡ ಮೇಲೆ, ತಡೆಗೋಡೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.