Dec 2, 2023, 6:19 PM IST
ಬೆಂಗಳೂರು (ಡಿ.2): ತಾಯಿ ಗರ್ಭದಲ್ಲಿ 9 ತಿಂಗಳು ಸಂತಸದಿಂದ ಇದ್ದು, ಭೂಮಿಗೆ ಬಂದ ಆ ಪುಟ್ಟ ಕಂದಮ್ಮನಿಗೆ ಕಣ್ಣು ಬಿಟ್ಟು ಜಗತ್ತನ್ನು ನೋಡುವ ಮೊದಲೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನರಕವನ್ನೇ ತೋರಿಸಿದ್ದಾರೆ. ಮೂರು ದಿನದ ಹಿಂದೆ ಹೆರಿಗೆಯಾದ ತಾಯಿ ಹಾಗೂ ಮಗುವಿಗೆ ಸರೊಯಾದ ಹಾಸಿಗೆ ಕೊಡದೇ ಆರೈಕೆ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ. ಇದು ಹೆರಿಗೆ ಮತ್ತು ಮಕ್ಕಳ ವಾರ್ಡ್ ಆಗಿದ್ದರೂ ಕನಿಷ್ಠ ಸ್ವಚ್ಛತೆಯೂ ಇಲ್ಲದಂತೆ ತಾಯಿ ಮಗುವನ್ನು ಕಸದಂತಿರುವ ಹಾಸಿಗೆ ಮೇಲೆ ಮಲಗಿಸಲಾಗಿದೆ. ಮೂರು ದಿನದ ಮಗುವಿಗೆ ರಾತ್ರಿಯಿಡೀ ಜಿರಳೆಗಳು ಮುತ್ತಿಕ್ಕಿ ಮನಸೋ ಇಚ್ಛೆ ಕಚ್ಚಿ ಗಾಯಗೊಳಿಸಿವೆ. ಇಲ್ಲಿಂದ ತಮ್ಮನ್ನು ಕಳಿಸಿಕೊಡಿ ಎಂದು ಕೇಳಿದರೂ ಬಾಣಂತಿ ತಾಯಿಗೆ ಬೈದು ಅಲ್ಲಿಯೇ ಮಲಗಿಸಿದ್ದು, ಮಗುವಿನ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದಾಳೆ.
ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!
ರಾಕ್ಷಸೀ ಪ್ರವೃತ್ತಿ ಮೆರೆದ ಆಸ್ಪತ್ರೆ ಸಿಬ್ಬಂದಿ ಹಾಗೂ ಮನ ಕಲಕುವ ಘಟನೆ ನಡೆದಿದ್ದು ಯಾವುದೋ ಮೂಲೆಯಲ್ಲಿರುವ ಹಳ್ಳಿಯಲ್ಲಲ್ಲ. ವಾರ್ಷಿಕ ಕೋಟಿ, ಕೋಟಿ ರೂ. ಅನುದಾನ ಬಿಡುಗಡೆ ಆಗುವ ಹಾಗೂ ರಾಜ್ಯದಲ್ಲಿಯೇ ಪ್ರಸಿದ್ಧಿಯಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದೆಂದರೆ ಗರ್ಭಿಣಿಯರು ಸುತಾರಾಂ ಒಪ್ಪುವುದಿಲ್ಲ. ಅಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಯ ಕಾಟದ ಜೊತೆಗೆ ತಾಯಿ- ಮಗುವನ್ನು ಆರೈಕೆಯಲ್ಲಿ ಕೇರ್‌ಲೆಸ್ ಮಾಡುತ್ತಾರೆಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಇಂತಹ ದುರ್ಘಟನೆ ನಡೆದಿರುವುದಕ್ಕೆ ಅಮಾಯಕ ಕೂಸು ನೋವನ್ನು ಅನುಭವಿಸುತ್ತಿದೆ.