Jun 22, 2022, 4:27 PM IST
ಬೆಳಗಾವಿ (ಜೂ. 22): ಮಿದುಳು ಜ್ವರದಿಂದ (Brain Fever) ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಬಾಲಕ ಶೈಲೇಶ್ ಬಗ್ಗೆ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಬೆಳಗಾವಿ ಡಿಸಿ (Belagavi DC) ನಿತೇಶ್ ಟೀಲ್, ಮಗುವಿನ ಚಿಕಿತ್ಸೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಲಕನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕರೆತರಲು ಸೂಚಿಸಲಾಗಿದೆ.
ಬೆಳಗಾವಿ: ಮೆದುಳು ಜ್ವರದಿಂದ ಬಳಲುತ್ತಿರುವ ಮಗ, ಉಳಿಸಿಕೊಳ್ಳಲು ನೆರವಿನ ನಿರೀಕ್ಷೆಯಲ್ಲಿ ಪೋಷಕರು
ಮೆದುಳು ಜ್ವರದಿಂದ (Brain Fever) ಬಳಲುತ್ತಿರುವ ಏಳೂವರೆ ವರ್ಷದ ಶೈಲೇಶ್ ಎಂಬ ಬಾಲಕನನ್ನು ಉಳಿಸಿಕೊಳ್ಳಲು ಹತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಬೆಳಗಾವಿಯ (Belagavi) ಖಾನಾಪುರದ (Khanapura) ನಂದಗಡದಲ್ಲಿ ಇಂತಹ ಮನಕಲಕುವ ಘಟನೆ ನಡೆದಿದೆ. ಕೂಲಿ ಕೆಲಸ ಮಾಡುವ ಕೃಷ್ಣಾ ಮತ್ತು ಸುಮಿತ್ರಾ ದಂಪತಿಯ ಮಗ ಈ ಶೈಲೇಶ್. 2 ತಿಂಗಳಿನಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಹುಷಾರಾಗಿಲ್ಲ.