Covid-19: ಟಾರ್ಗೆಟ್ ರೀಚ್ ಮಾಡೋಕೆ ಕೋವಿಡ್ ಪಾಸಿಟಿವ್ ರಿಪೋರ್ಟ್?

Jan 20, 2022, 6:39 PM IST

ಬಳ್ಳಾರಿ (ಜ. 20): ಕೋವಿಡ್ ಟೆಸ್ಟಿಂಗ್ ಬಗ್ಗೆಯೇ ಅನುಮಾನ ಮೂಡಿಸುವಂಥ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಟಾರ್ಗೆಟ್ ರೀಚ್ ಮಾಡುವ ಸಲುವಾಗಿ ಆರೋಗ್ಯ ಇಲಾಖೆ ಪಾಸಿಟಿವ್ ವರದಿ ನೀಡುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ. ಈ ನಿಟ್ಟಿನಲ್ಲಿ ಯುವಕನೊಬ್ಬ ಸೌದಿ ಅರೇಬಿಯಾದಲ್ಲಿ ಸಿಕ್ಕ ತನ್ನ ಕೆಲಸವನ್ನೇ ಕಳೆದುಕೊಂಡ ಘಟನೆ ನಡೆದಿದೆ.

Coronavirus, ವೀಕೆಂಡ್ ಕರ್ಫ್ಯೂಗೆ ವಿರೋಧ, ಕೊರೋನಾ ತಡೆಗೆ ಸಲಹೆ ಕೊಟ್ಟ ಮಾಜಿ ಸಿಎಂ ಸಿದ್ದು
ಶೇಖ್ ರೆಹಮಾನ್ ಎನ್ನುವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾಗ ಪಾಸಿಟಿವ್ ಎನ್ನುವ ರಿಪೋರ್ಟ್ ಬಂದಿದ್ದರೆ, 24 ಗಂಟೆಯ ಒಳಗಾಗಿ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿದ ವೇಳೆ ನೆಗೆಟಿವ್ ರಿಪೋರ್ಟ್ ಬಂದಿದೆ. ಆ ಕಾರಣದಿಂದಾಗಿ ಆರೋಗ್ಯ ಇಲಾಖೆಯ ಪಾಸಿಟಿವ್ ರಿಪೋರ್ಟ್ ಗಳ ಮೇಲೆ ಅನುಮಾನ ಪಡುವಂತಾಗಿದೆ. ಪಾಸಿಟಿವ್ ರಿಪೋರ್ಟ್ ಬಂದ ಬೆನ್ನಲ್ಲಿಯೇ ಶೇಖ್ ರೆಹಮಾನ್ ಅವರ ವಿಮಾನ ಟಿಕೆಟ್ ಕೂಡ ಕ್ಯಾನ್ಸಲ್ ಆಗಿದೆ.