ಒಮಿಕ್ರೋನ್ ಭೀತಿ (Omicron Variant) ಹಿನ್ನಲೆಯಲ್ಲಿ, ಹೊಸವರ್ಷಾಚರಣೆಗೆ (New Year 2022) ಹೊಸ ಗೈಡ್‌ಲೈನ್ಸ್ ಜಾರಿ ಮಾಡಲಾಗಿದೆ. ಡಿ. 28 ರಿಂದ ಜನವರಿ 6 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕ ಸೆಲಬ್ರೇಶನ್‌ಗೆ ಬ್ರೇಕ್ ಹಾಕಲಾಗಿದೆ.
ಬೆಂಗಳೂರು (ಡಿ. 26): ಒಮಿಕ್ರೋನ್ ಭೀತಿ (Omicron Variant) ಹಿನ್ನಲೆಯಲ್ಲಿ, ಹೊಸವರ್ಷಾಚರಣೆಗೆ (New Year 2022) ಹೊಸ ಗೈಡ್‌ಲೈನ್ಸ್ ಜಾರಿ ಮಾಡಲಾಗಿದೆ. ಡಿ. 28 ರಿಂದ ಜನವರಿ 6 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕ ಸೆಲಬ್ರೇಶನ್‌ಗೆ ಬ್ರೇಕ್ ಹಾಕಲಾಗಿದೆ.
'ನೈಟ್ ಕರ್ಫ್ಯೂ ಆದೇಶ ಪುನರ್ ಪರಿಶೀಲನೆ ಇಲ್ಲ. ಅಕ್ಕಪಕ್ಕದ ರಾಜ್ಯದ ಪರಿಸ್ಥಿತಿ ನೋಡಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಉದ್ಯಮಿಗಳಿಗೆ ವ್ಯಾಪಾರ ವಹಿವಾಟು ನಷ್ಟವಾಗುತ್ತದೆ ಎಂಬುದು ಗಮನದಲ್ಲಿದೆ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಬದಲಾವಣೆ ಸಾಧ್ಯವಿಲ್ಲ. ಒಮಿಕ್ರೋನ್ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ.
ಇನ್ನು ಸರ್ಕಾರದ ನಿರ್ಧಾರಕ್ಕೆ ಆಟೋ ಚಾಲಿಕರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 'ರಾತ್ರಿ ವೇಳೆ ಬಸ್‌ಗಳ ಓಡಾಟಕ್ಕೆ ಅವಕಾಶ ಕೊಟ್ಟಿದ್ದೀರಿ. ಆಟೋಗಳಿಗೆ ನಿರ್ಬಂಧ ಯಾಕೆ..? ಕೊರೋನಾದಿಂದ ಆಟೋ ಚಾಲಕರು ಸಂಕಷ್ಟದಲ್ಲಿದ್ದೇವೆ. ದಯವಿಟ್ಟು ಆಟೋ, ಟ್ಯಾಕ್ಸಿ ಚಾಲಕರಿಗೂ ಅವಕಾಶ ಕೊಡಬೇಕು. ನಿರ್ಬಂಧವನ್ನು ಪುನರ್ ಪರಿಶೀಲಿಸಿ' ಎಂದು ಆದರ್ಶ ಆಟೋ ಮಾಲಿಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.